ರೌಡಿ ಶೀಟರ್ ರಂಜಿತ್ ಕೊಲೆ ಆರೋಪಿಗಳ ಮೇಲೆ ಪೋಲೀಸರ ಗುಂಡಿನ ದಾಳಿ

ಬೆಂಗಳೂರಿನಲ್ಲಿ ಪೊಲೀಸರು ರೌಡಿ ಶೀಟರ್ ರಂಜಿತ್ ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ಧಾರೆ. ಹೆಣ್ಣೂರು ಪೊಲೀಸ್ ಇನ್ಸಪೆಕ್ಟರ್ ನಿಂದ ಶಾಮ್ ಮತ್ತೆ ಸಂತೋಷ್ ರೌಡಿ ಶೀಟರ್ ಬಂಧನದ ವೇಳೆ ಗುಂಡಿನ ದಾಳಿ ನಡೆದಿದೆ. ರೌಡಿ ಶಿಟರ್ ರಂಜಿತ್ ಕೊಲೆ ಪ್ರಕರಣ ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಲಿಂಗರಾಜಪುರಂ ಫ್ಲೈ ಓವರ್ ಬಳಿ ನಿನ್ನೆ ತಡರಾತ್ರಿ ಶೂಟೌಟ್ ನಡೆದಿದೆ.

 

 

 

ಪೊಲೀಸರನ್ನು ಕಂಡು ಶಾಮ್ ಹಾಗೂ ಸಂತೋಷ್ ಎಸ್ಕೇಪ್ ಆಗೋಕೆ ನೋಡಿದ್ಧಾರೆ. ನಂತರ ಪೊಲೀಸರ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಪೋಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಆರೋಪಿಗಳ ಬಂಧಿಸಿದ್ಧಾರೆ. ಬಂಧಿತ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊನ್ನೆ ತಡರಾತ್ರಿ ಫ್ರಜರ್ ಟೌನ್ ಪ್ಯಾಪ್ತಿಯಲ್ಲಿ ಕೊಲೆ ಪ್ರಕರಣ ನಡೆದಿತ್ತು.

Comments are closed.

Social Media Auto Publish Powered By : XYZScripts.com