ಲೈನ್‌ಮನ್‌ಗೆ ಪರ್ಯಾಯ ಹೆಸರು ಇಡಿ : ಆಕರ್ಷಕ ಬಹುಮಾನ ಗೆಲ್ಲಿ

ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಲೈನ್‌ಮನ್‌ಗಳು ಎಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಮೆಚ್ಚಿ ಅವರಿಗೆ ಬೇರೆ ಹೆಸರು ನೀಡಲು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಚಿಂತಿಸಿದ್ದಾರೆ. ರಾಜ್ಯ ಇಂಧನ ಇಲಾಖೆಯು ಇಂತಹ ಲೈನ್‌ಮನ್‌ಗಳಿಗೆ ಹೊಸ ಹೆಸರನ್ನು ಸೂಚಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಲೈನ್‌ಮನ್‌ಗೆ ಪರ್ಯಾಯ ಹೆಸರನ್ನು ಸೂಚಿಸಿ ಆಯ್ಕೆಯಾದವರಿಗೆ ಆಕರ್ಷಕ ಬಹುಮಾನ ಸಿಗಲಿದೆ. ಒಂದಕ್ಕಿಂತ ಹೆಚ್ಚಿನ ಪ್ರವೇಶಗಳು ಬಂದಲ್ಲಿ  ಲಕ್ಕಿ ಡ್ರಾ ಮೂಲಕ ಒಬ್ಬ ವಿಜೇತರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. dkshivakumarinc@gmail.com ಗೆ ನಿಮ್ಮ ಆಯ್ಕೆಯ ಹೆಸರನ್ನು ಕಳುಹಿಸಬಹುದಾಗಿದೆ ಎಂದು ಡಿ.ಕೆ ಶಿವಕುಮಾರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಿಳಿಸಿದ್ದಾರೆ.

Comments are closed.