ಬುರ್ಹಾನ್‌ ವನಿ ಹತ್ಯೆಯಾಗಿ ಒಂದು ವರ್ಷ ಹಿನ್ನೆಲೆ: ಕಣಿವೆಯಲ್ಲಿ ಇಂಟರ್‌ನೆಟ್‌ ಬಂದ್‌

ಶ್ರೀನಗರ: ಹಿಜ್ಬುಲ್‌  ಮುಜಾಹಿದ್ದೀನ್‌ ಸಂಘಟನೆಯ ಮುಖಂಡ ಬುರ್ಹಾನ್‌ ವನಿ ಹತ್ಯೆಯಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಾದ್ಯಂತ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಬಿಗಿ ಬಂದೋಬಸ್ತ್ ಹಾಕಲಾಗಿದ್ದು, ಇಂಟರ್‌ನೆಟ್‌ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ.

ಬಿಗಿ ಭದ್ರತೆ ನಡುವೆಯೂ ಕಾಶ್ಮೀರದ ಅನೇಕ ಕಡೆ ಗೋ ಇಂಡಿಯಾ, ಗೋ ಬ್ಯಾಕ್‌ ಹಾಗೂ ವಿ ವಾಂಟ್‌ ಫ್ರೀಡಂ ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಯಾವುದೇ ರೀತಿಯ ವದಂತಿಗಳು, ಪ್ರಚೋದನಕಾರಿ ಭಾಷಣ, ಕೃತ್ಯ ನಡೆಯದಂತೆ ಗುರುವಾರ ರಾತ್ರಿಯಿಂದಲೇ ಇಂಟರ್‌ನೆಟ್‌ ಸೇವೆಯನ್ನು ಬಂದ್‌ ಮಾಡಲಾಗಿದೆ. ಜೊತೆಗೆ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು 21 ಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ.

ಬುರ್ಹಾನ್‌ ವನಿಯನ್ನು 2016ರ ಜುಲೈನಲ್ಲಿ  ಅನಂತನಾಗ್‌ ಜಿಲ್ಲೆಯ ಕೋಕರ್‌ನಾಗ್‌ ಎಂಬಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಅಂದಿನಿಂದ ಇವತ್ತಿನವರೆಗೂ ಸಾಕಷ್ಟು ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಈ ಘಟನೆಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದಲ್ಲದೆ, ಸಾವಿರಾರು ಮಂದಿ ಗಾಯಾಳುಗಳಾಗಿದ್ದಾರೆ.

 

 

 

Comments are closed.

Social Media Auto Publish Powered By : XYZScripts.com