ಸುದೀಪ್‌ ಜೊತೆ ಸಿನಿಮಾ ಕುರಿತು ಶಿವರಾಜ್‌ ಕುಮಾರ್‌ ಹೇಳಿದ್ದೇನು….?

ಉಡುಪಿ: ವಿಲನ್‌ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಲು ಕಾತರದಿಂದ ಕಾಯುತ್ತಿರುವುದಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್ ಹೇಳಿದ್ದಾರೆ.  ಲಂಡನ್‌ನಲ್ಲಿ ಜುಲೈ 15ರಂದು ಶೂಟಿಂಗ್‌ ನಡೆಯಲಿದ್ದು, ಸಿನಿಮಾದಲ್ಲಿ ನಾನು ಸುದೀಪ್ ಮುಖಾಮುಖಿಯಾಗಲಿದ್ದೇವೆ ಎಂದಿದ್ದಾರೆ.

ಡಬ್ಬಿಂಗ್‌ ಕುರಿತು ಹೇಳಿಕೆ ನೀಡಿರುವ ಶಿವರಾಜ್‌ ಕುಮಾರ್‌ ಡಬ್ಬಿಂಗ್‌ ಮಾಡುವುದು ಸರಿ ಎಂದು ನನಗನ್ನಿಸುವುದಿಲ್ಲ ಎಂದಿದ್ದಾರೆ. ಆದರೆ ಜನರು ಬೇಕು ಎಂದರೆ ಬೇಡ ಎನ್ನಲು ನಾನ್ಯಾರು ಎಂದಿರುವ ಶಿವರಾಜ್‌ ಕುಮಾರ್‌, ಜನರ ಮನರಂಜನೆಗಾಗಿಯೇ ಸಿನಿಮಾ ಮಾಡುತ್ತೇವೆ. ಜನರ ಅಭಿಪ್ರಾಯಕ್ಕೆ ನಾನು ಬದ್ದನಾಗಿರುತ್ತೇನೆ. ಜನರು ಇಷ್ಟ ಪಟ್ಟರೆ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದಿದ್ದಾರೆ. ತುಳು ಭಾಷೆಯಲ್ಲಿ ಉತ್ತಮ ಸಿನಿಮಾ ಬರುತ್ತಿದೆ. ಭವಿಷ್ಯದಲ್ಲಿ ಸಾಧ್ಯವಾದರೆ ತುಳು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

 

 

 

Comments are closed.

Social Media Auto Publish Powered By : XYZScripts.com