ಬಾಡೂಟ ಪ್ರಕರಣ : ಸೇಂಟ್ ಮೇರಿಸ್ ಶಾಲೆಗೆ ನೋಟಿಸ್, ಸಮಜಾಯಿಷಿ ನೀಡಲು ತಾಕೀತು

ಅನುದಾನಿತ ಶಾಲೆಯಲ್ಲಿ ಬಾಡೂಟ ಸೇವನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುರುವಾರ ಕಾರಣ ಕೇಳಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಉದಯ್‌ ಕುಮಾರ್‌ ಗುರುವಾರ ನೋಟಿಸ್ ಜಾರಿ ಮಾಡಿದ್ದಾರೆ.  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಸೆಂಟ್ ಮೇರಿಸ್ ಶಾಲೆಯ ಕಾರ್ಯದರ್ಶಿ ಹಾಗೂ ಮುಖ್ಯೋಪಾಧ್ಯಾಯರಿಗೆ ಈ ನೋಟಿಸ್‌ ಜಾರಿ ಮಾಡಿದ್ದು, ಈ ನೋಟೀಸ್ ತಲುಪಿದ ಮೂರು ದಿನಗಳೊಳಗಾಗಿ ಲಿಖಿತರೂಪದಲ್ಲಿ ಸಮಜಾಯಿಷಿ ನೀಡುವಂತೆ ತಾಕೀತು ಮಾಡಿದ್ದಾರೆ. ಇದು ಕರ್ತವ್ಯಲೋಪ ಹಾಗೂ ಉದಾಸೀನತೆಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದು, ಈ ನಿಟ್ಟಿನಲ್ಲಿ ಏಕೆ ನಿಮ್ಮ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಬಾರದು, ಮುಖ್ಯ ಶಿಕ್ಚಕರ ವಿರುದ್ದ ಕ್ರಮಕೈಗೊಳ್ಳಲು ಮೇಲಧಿಕಾರಿಗಳಿಗೆ ಏಕೆ ಶಿಫಾರಸ್ಸು ಮಾಡಬಾರದು? ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.   ಬಾಡೂಟ ಸೇವನೆಯಲ್ಲಿ ಸುಮಾರು ಇಪ್ಪತ್ತು ಶಿಕ್ಷಕರು ಭಾಗಿಯಾಗಿದ್ದು ತಿಳಿದುಬಂದಿದ್ದು,  ಶಿಕ್ಷಕರೊಬ್ಬರು ಬೇರೆಡೆಗೆ ವರ್ಗಾವಣೆಗೊಂಡರೆಂಬ ಕಾರಣಕ್ಕೆ ಶಾಲಾ ಸಮಯದಲ್ಲಿ ವೈಯಕ್ತಿಕ ಕಾರ್ಯಕ್ರಮಗಳನ್ನು ನಡೆಸಿರುವುದು ನಿಯಮಬಾಹಿರವಾಗಿದೆ.
 
 
ಮೈಸೂರಿನ ಹೆಚ್.ಡಿ.ಕೋಟೆಯ ಸೇಂಟ್‌ ಮೇರಿಸ್ ಚರ್ಚ್ ಸೆಂಟ್ರಲ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಶಿಕ್ಷಕರು ಬಾಡೂಟ ಮಾಡಿದ ಪ್ರಕರಣ ಬಯಲಾಗಿತ್ತು. ಸೇಂಟ್‌ ಮೇರಿಸ್ ಚರ್ಚ್ ಸೆಂಟ್ರಲ್ ಶಾಲೆಯು ಸರ್ಕಾರಿ ಅನುದಾನಿತ ಶಾಲೆಯಾಗಿದ್ದು, ಶಾಲೆಯ ಒಳಗೇ ಶಿಕ್ಷಕ ವರ್ಗ ಮಾಂಸಹಾರ ಸೇವನೆ ಮಾಡಿದ್ದರು. ಮಕ್ಕಳಿಗೆ ಬಿಸಿಯೂಟ ಮಾಡುವ ಅಡುಗೆ ಸಿಬ್ಬಂದಿಗಳಿಂದಲೇ ಮಾಂಸಹಾರ ತಯಾರು ಮಾಡಿಸಿದ್ದ ಶಿಕ್ಷಕರು, ಶಿಕ್ಷಕರ ವರ್ಗವಣೆಯ ಬಿಳ್ಕೊಡುಗೆ ಕಾರ್ಯಕ್ರಮಕ್ಕಾಗಿ ಬಾಡೂಟ ಆಯೋಜನೆ ಮಾಡಲಾಗಿತ್ತು. ಘಟನೆ ತಿಳಿದು ಶಿಕ್ಷಣ ಇಲಾಖೆಯ ಹೆಚ್.ಡಿ.ಕೋಟೆಯ ಪ್ರೌಢಶಾಲಾ ವ್ಯಾಪ್ತಿಯ ಬಿ.ಆರ್.ಸಿ ಅಧಿಕಾರಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,  ಘಟನೆ ಕುರಿತು ತಾಲ್ಲೂಕು ಬಿಇಓಗೆ ಮಾಹಿತಿ ನೀಡಿದ್ದರು.

Comments are closed.

Social Media Auto Publish Powered By : XYZScripts.com