ಮೈಸೂರು : ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ, ಸಾವಿನ ಕಾರಣ ಇನ್ನೂ ನಿಗೂಢ

ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಮೀನಾಕ್ಷಿ (21 ) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಕಲಬುರಗಿಯವಳಾಗಿದ್ದು, ಸದ್ಯ ಮೈಸೂರಿನ ಹೆಬ್ಬಾಳದ ಮೂರನೇ ಹಂತದಲ್ಲಿರು ಮನೆಯಲ್ಲಿ ವಾಸವಾಗಿದ್ದಳು.

ಈಕೆ ಇನ್ಫೋಸಿಸ್ ನಲ್ಲಿ ಟ್ರೈನಿ ಆಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ತಿಳಿದುಬಂದಿದ್ದು,  ಕಳೆದ ಮೂರ್ನಾಲ್ಕು ದಿನಗಳಿಂದ ಕೆಲಸಕ್ಕೆ ತೆರಳಿರಲಿಲ್ಲ. ಇದರಿಂದ ಆಕೆಯ ಸ್ನೇಹಿತೆಯರು ಆಕೆಗೆ ಫೋನಾಯಿಸಿದ್ದರು. ಕರೆಯನ್ನೂ ಸ್ವೀಕರಿಸಿರಲಿಲ್ಲ. ಆದರೆ ಅಕ್ಕಪಕ್ಕದ ಮನೆಯವರಿಗೆ ಕೊಳೆತ ವಾಸನೆ ಬರತೊಡಗಿತ್ತು. ಹೆಬ್ಬಾಳು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕಾಗಮಿಸಿದ ಇನ್ಸಪೆಕ್ಟರ್ ತಿಮ್ಮೇಗೌಡ, ಎಎಸ್ ಐ ಕೃಷ್ಣೇಗೌಡ ಪರಿಶೀಲನೆ ನಡೆಸಿದ್ದು, ಯುವತಿ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.⁠⁠⁠⁠

Comments are closed.

Social Media Auto Publish Powered By : XYZScripts.com