ಪಕ್ಷ ಸಂಘಟನೆ & ರಾಜ್ಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಿ : ದೇವೇಗೌಡ

ಖಾಸಗಿ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಜೆಡಿಎಸ್ ಪ್ರಮುಖ ನಾಯಕರು ಹಾಗೂ ಕೋರ್ ಕಮೀಟಿ ಸದಸ್ಯರ ಸಭೆ ಮುಕ್ತಾಗೊಂಡಿದೆ. ಸಭೆಯ ನಂತರ ಕುಮಾರಸ್ವಾಮಿ ಮಾತನಾಡಿ ಪಕ್ಷದ ಸಂಘಟನೆ ಮತ್ತು ರಾಜ್ಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುವಂತೆ ದೇವೇಗೌಡರು ಸಲಹೆ ನೀಡಿದ್ದಾರೆಂದು ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಮಾತನಾಡಿ ‘ಎಲ್ಲಾ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಓಬಿಸಿ, ಎಸ್ಸಿ, ಅಲ್ಪಸಂಖ್ಯಾತ ಸಮಾವೇಶಗಳನ್ನು ಮಾಡಲು ನಿರ್ಧಾರ ಕೈಗೊಳ್ಳಲಾಯಿತು. ಓಬಿಸಿ ಸಮಾವೇಶ ಮೈಸೂರಿನಲ್ಲಿ, ರೈತ ಸಮಾವೇಶ ಬಿಜಾಪುರದಲ್ಲಿ, ಎಸ್ಟಿ ಸಮಾವೇಶ ತುಮಕೂರಿನಲ್ಲಿ, ಮಹಿಳಾ ಸಮಾವೇಶ ಬೆಂಗಳೂರಿನಲ್ಲಿ, ಅಲ್ಪಸಂಖ್ಯಾತ ಸಮಾವೇಶ ರಾಯಚೂರಿನಲ್ಲಿ ಮಾಡಲು ನಿರ್ಧರಿಸಲಾಗಿದೆ. ದೇವೇಗೌಡರು, ಹಾಗೂ ವಿಶ್ವನಾಥ್ ರವರು ಹಲವು ಸಲಹೆಗಳನ್ನು ನೀಡಿದ್ದಾರೆ. ರಾಜ್ಯ ಘಟಕದ ಪಧಾದಿಕಾರಿಗಳಲ್ಲಿ ಎಲ್ಲಾ ಸಮುದಾಯ ವನ್ನು ವಿಶ್ವಾಸ ಕ್ಕೆ ತೆಗೆದುಕೊಂಡು ಪಟ್ಟಿ ಅಂತಿಮ ಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದ ವಿವಿಧೆಡೆ ರೈತರ, ಮಹಿಳೆಯರ, ಯುವ ಘಟಕ, ಅಲ್ಪಸಂಖ್ಯಾತ, ಎಸ್ಸಿ ಸಮುದಾಯದ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ ‘ ಎಂದರು.

‘ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಶಾಂತಿ ಕದಡುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ನಿಂದ ಸೌಹಾರ್ದಯುತ ಪಾದಯಾತ್ರೆ ನಡೆಸಲಾಗುವುದು’ ಎಂದರು.

‘ ಮುಂದಿನ ಚುನಾವಣೆಗೆ ಪ್ರಣಾಳಿಕೆ ಸಿದ್ದಗೊಳಿಸೋ ಬಗ್ಗೆ ಚರ್ಚೆ ನಡೆಸಿದ್ದೇವೆ. ನಮ್ಮ ರಾಜ್ಯದ ಪ್ರಮುಖ ಸಮಸ್ಯೆ ಗಳು ಪ್ರಣಾಳಿಕೆಯಲ್ಲಿ ಇರಬೇಕು ಅಂತಾ ತೀರ್ಮಾನಿಸಲಾಗಿದೆ. ಈಗಲೇ ಪ್ರಣಾಳಿಕೆಯಲ್ಲಿ ಇರುವ ವಿಷಯಗಳ ಬಗ್ಗೆ ಬಹಿರಂಗಗೊಳಿಸುವುದು ಬೇಡ ಅಂತಾ ಕೆಲವರು ಸಲಹೆ ನೀಡಿದ್ದಾರೆ. ಇತ್ತೀಚಿಗೆ ಪಕ್ಷಕ್ಕೆ ಸೇರ್ಪಡೆಯಾದ ವಿಶ್ವನಾಥ್ ರಿಗೆ ಹಿಂದುಳಿದ ವರ್ಗಗಳ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ.

ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಇರೋದು ನಿಜ. ಆದರೆ ಕುಟುಂಬದಿಂದ ಇಬ್ಬರ ಸ್ಪರ್ಧೆ ಎಂಬ ಹೇಳಿಕೆಗೆ ಈಗಲು ಬದ್ದವಾಗಿದ್ದೇವೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರಾಷ್ಟ್ರೀಯ ಅಧ್ಯಕ್ಷರ ಕೈಯಲ್ಲಿದೆ. ಅಭ್ಯರ್ಥಿಗಳ ಕೊರತೆ ಬಿಜೆಪಿ, ಕಾಂಗ್ರೆಸ್ ನಲ್ಲಿದೆ. ನಾವು ಅಭ್ಯರ್ಥಿಗಳ ಪಟ್ಟಿ ಬಿಟ್ಟರೆ ಕಾಂಗ್ರೆಸ್ ಬಿಜೆಪಿ ಅವರು ಟ್ಯಾಪ್ ಮಾಡೋ ಅವಕಾಶ ಇದೆ. ಹಾಗಾಗಿ ನೋಡಿಕೊಂಡು ಪಟ್ಟಿ ಬಿಡುವಂತೆ ದೇವೇಗೌಡರು ಸೂಚಿಸಿದ್ದಾರೆ. ಆಪರೇಷನ್ ಕಮಲದಿಂದ ನಮಗೆ ಅನುಭವವಾಗಿದೆ. ಅದಕ್ಕೆ ಪಟ್ಟಿ ನಿಧಾನವಾಗಿ ಬಿಡುಗಡೆ ಮಾಡಲು ಹೇಳಿದ್ದೇನೆ. ಹಿಂದೆ ನಮ್ಮ ಏಳೆಂಟು ಅಭ್ಯರ್ಥಿಗಳನ್ನು ಆಪರೇಷನ್ ಮಾಡಿದ್ದರು. ಹೀಗಾಗಿ ಪಟ್ಟಿ ಬಿಡುಗಡೆ ಬೇಡ ಅಂದಿದ್ದೇನೆ. ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಒಂದೆರಡು ಜಿಲ್ಲೆ ಬಿಟ್ಟು ಎಲ್ಲಾ ಜಿಲ್ಲೆಯಲ್ಲೂ ನಮಗೆ ಪ್ರಬಲ ಅಭ್ಯರ್ಥಿಗಳು ಇದ್ದಾರೆ ‘ ಎಂದು ಹೇಳಿದ್ದಾರೆ.

Comments are closed.