ಬಾಬು ಜಗಜೀವನ ರಾಮ್ ರ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ ತುಂಬಿದ್ದಾರೆ : ಎಚ್. ಆಂಜನೇಯ

ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಎಚ್.ಆಂಜನೇಯ ಮಾತನಾಡಿ ‘ಬಾಬು ಜಗಜೀವನ್ ರಾಮ್ ಈ ದೇಶದ ಶ್ರೇಷ್ಠ ರಾಜಕಾರಣಿ’ ಎಂದರು. ಮಾತು ಮುಂದುವರೆಸಿದ ಅವರು ‘ ಪ್ರಧಾನ ಮಂತ್ರಿಯಾಗುವ ಎಲ್ಲಾ ಅರ್ಹತೆ ಅವರಿಗಿತ್ತು, ಆದರೆ ಆಗಲಿಲ್ಲ. ಆ ನೋವು ಇಂದಿಗೂ ನಮ್ಮಲ್ಲಿದೆ. ಸೋಲರಿಯದ ಬಾಬು ಜಗಜೀವನ್ ರಾಮ್ ರ ಸ್ಥಾನವನ್ನು ಈಗ ಮಲ್ಲಿಕಾರ್ಜುನ ಖರ್ಗೆ ತುಂಬಿದ್ದಾರೆ.

  

ಮಾಗಡಿ ರಸ್ತೆಯಲ್ಲಿ ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರ ತೆರೆಯಲಾಗುವುದು. ಇದರ ಶಂಕುಸ್ಥಾಪನೆ ಇದೇ ತಿಂಗಳು ನಡೆಯಲಿದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಭವನ ನಿರ್ಮಾಣ ಮಾಡುತ್ತಿದ್ದೇವೆ ‘ ಎಂದು ಹೇಳಿದರು.

Comments are closed.