ಆ ಕಾಲದಲ್ಲಿ ಪೊದೆ, ಗಿಡಗಳ ಮರೆಯಲ್ಲೇ ಎಲ್ಲಾ ನಡೀತಿತ್ತು..ಶ್ರೀದೇವಿ ಶಾಕಿಂಗ್ ಕಾಮೆಂಟ್!

ಬಾಲಿವುಡ್ ಚೆಲುವೆ ಶ್ರೀದೇವಿ ಅಭಿನಯದ `ಮಾಮ್’ ಸಿನಿಮಾ ಈ ವಾರ ತೆರೆಗೆ ಬರಲಿದೆ. ಇದೇ ಶುಕ್ರವಾರಕ್ಕೆ ಅತಿಲೋಕ ಸುಂದರಿ ಶ್ರೀದೇವಿ ಸಿನಿ ಜರ್ನಿಗೆ 50ವರ್ಷ ತುಂಬುತ್ತೆ. ಇದೇ ಕಾರಣಕ್ಕೆ ಅವ್ರ ಬಹುನಿರೀಕ್ಷಿತ ಚಿತ್ರವನ್ನ ಈ ವಾರ ಬಿಡುಗಡೆ ಮಾಡಲಾಗ್ತಿದೆ. `ಮಾಮ್’ ಪ್ರಮೋಷನ್‍ನಲ್ಲಿ ಬ್ಯೂಸಿಯಾಗಿರೋ ಶ್ರೀದೇವಿ ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಆಗಿನ ಕಾಲದ ಸಿನಿಮಾ ಚಿತ್ರೀಕರಣದ ಸಮಸ್ಯೆಗಳನ್ನ ಅವರ ಹೇಳಿಕೊಂಡಿದ್ದಾರೆ. ಈಗಿನ ಕಲಾವಿದರನ್ನ ಶೂಟಿಂಗ್ ಸಮಯದಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗುತ್ತೆ. ಆದ್ರೆ ತಾವು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ, ನಾಯಕಿಯಾಗಿ ಕರಿಯರ್ ಪ್ರಾರಂಭಿಸಿದ ದಿನಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅದ್ರಲ್ಲೂ ಔಟ್ ಡೋರ್ ಶೂಟಿಂಗ್ ವೇಳೆ ಅಂದಿನ ಕಲಾವಿದರು ಎದುರಿಸುತ್ತಿದ್ದ ಕಷ್ಟಗಳನ್ನ ಶ್ರೀದೇವಿ ವಿವರಿಸಿದ್ದಾರೆ.

ಈಗ ಔಟ್ ಡೋರ್ ಶೂಟಿಂಗ್ ವೇಳೆ ಕಲಾವಿದರು ಉಳಿದುಕೊಳ್ಳಲು, ಬಟ್ಟೆ ಬದಲಾಯಿಸಲು ಕ್ಯಾರವ್ಯಾನ್‍ಗಳು ಇರುತ್ತವೆ. ಆದ್ರೆ ಹಿಂದಿನ ಕಾಲದಲ್ಲಿ ಅಂತಹ ಸೌಕರ್ಯಗಳು ಇರುತ್ತಿರಲಿಲ್ಲ. ಕೆಲವೊಮ್ಮೆ ಪೊದೆ ಅಥವಾ ಗಿಡಗಳ ಮರೆಯಲ್ಲಿ ನಾವು ಬಟ್ಟೆಗಳನ್ನ ಬದಲಾಯಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೆವು ಅಂತ ಶ್ರೀದೇವಿ ಹೇಳಿಕೊಂಡಿದ್ದಾರೆ. ಔಟ್ ಡೋರ್ ಶೂಟಿಂಗ್ ಸಮಯದಲ್ಲಿ ನಾನು ನೀರು ಕುಡಿಯೋಕು ಹೆದರುತ್ತಿದ್ದೆ, ಕಾರಣ ಶೂಟಿಂಗ್ ನಡೆಯುವ ಸ್ಥಳದಲ್ಲಿ ಶೌಚಾಲಯದ ವ್ಯವಸ್ಥೆ ಕೂಡ ಇರುತ್ತಿರಲಿಲ್ಲ. ಇನ್ನೂ ಮಳೆಯಲ್ಲಿ ನೆನೆದು ಡ್ಯಾನ್ಸ್ ಮಾಡೋದಕ್ಕೂ ಕಷ್ಟಪಡುತ್ತಿದ್ದೆವು. ಯಾಕಂದ್ರೆ ಅದರಿಂದ ಎಷ್ಟೋಸಲ ಅನಾರೋಗ್ಯಕ್ಕೆ ತುತ್ತಾಗುವ ಭಯ ನಮ್ಮನ್ನ ಕಾಡ್ತಿತ್ತು ಅಂತ ಅವರು ತಮ್ಮ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

ಶ್ರೀದೇವಿ ಅಷ್ಟೆ ಅಲ್ಲ ಕೆಲದಿನಗಳ ಹಿಂದೆ ದಕ್ಷಿಣ ಭಾರತದ ಖ್ಯಾತ ನಟಿ ರಾಶಿ ಕೂಡ ಅಂದಿನ ಕಾಲದ ಔಟ್ ಡೋರ್ ಶೂಟಿಂಗ್ ಸಮಸ್ಯೆಗಳನ್ನ ಹೇಳಿಕೊಂಡಿದ್ದರು. ಆಗೆಲ್ಲಾ ಕ್ಯಾರವ್ಯಾನ್‍ಗಳ ವ್ಯವಸ್ಥೆ ಇರುತ್ತಿರಲಿಲ್ಲ. ಎಷ್ಟೋ ಸಲ ಮರಗಳ ನೆರಳಲ್ಲೇ ಕಲಾವಿದರು ವಿಶ್ರಾಂತಿ ಪಡೆಯುತ್ತಿದ್ದರು. ಗಿಡಗಳ ಮರೆಯಲ್ಲೇ ಬಟ್ಟೆ ಬದಲಾಯಿಸಿಕೊಳ್ಳಬೇಕಾಗುತ್ತಿತ್ತು ಅಂತ ರಾಶಿ ತಿಳಿಸಿದ್ದರು.

One thought on “ಆ ಕಾಲದಲ್ಲಿ ಪೊದೆ, ಗಿಡಗಳ ಮರೆಯಲ್ಲೇ ಎಲ್ಲಾ ನಡೀತಿತ್ತು..ಶ್ರೀದೇವಿ ಶಾಕಿಂಗ್ ಕಾಮೆಂಟ್!

Comments are closed.