ಬಳ್ಳಾರಿ : ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ, ನಾಲ್ಕೂವರೆ ಕೋಟಿ ಪಂಗನಾಮ ಹಾಕಿದ ಭೂಪ..!

ಅತಿ ಆಸೆ ಗತಿಗೇಡು ಎನ್ನುವ ಮಾತು ಗೊತ್ತಿದ್ದರೂ ನಮ್ಮ ಜನ ಮೋಸ ಹೋಗವುದಂತೂ ಇಂದಿಗೂ ತಪ್ಪುತ್ತಿಲ್ಲ. ತಮ್ಮ ಹಣಕ್ಕೆ ನಾಲ್ಕರಿಂದ ಹತ್ತರಷ್ಟು ಹೆಚ್ಚುವರಿ ಬಡ್ಡಿ ಕೊಡುತ್ತೇನೆಂದು ಹೇಳಿದ ವ್ಯಕ್ತಿಯೊಬ್ಬನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣ ದಲ್ಲಿ ನಾಲ್ಕುವರೆ ಕೋಟಿ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡ ಜನರು ಈಗ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ. ಬಡ್ಡಿ ಆಸೆಗೆ ಹೋದ ಜನರಿಗೆ ಖದೀಮ ಮಣ್ಣು ಮುಕ್ಕಿಸಿದ್ದಾನೆ. ಕೆಟ್ಟ ಮೇಲೂ ನಮ್ಮ ಜನಕ್ಕೆ ಬುದ್ಧಿನೇ ಬರುತ್ತಿಲ್ಲ.

 

 

ಮಸ್ಕಿ ಮೂಲದ ಮಹಮ್ಮದ್ ದಸ್ತಗಿರಿ ಎನ್ನುವ ವ್ಯಕ್ತಿ  ಕ್ರಾಸ್‍ಮಾಸ್  ಅಗ್ರಿಕೋಲ್ ಪ್ರೈವೇಟ್ ಲಿಮಿಟೆಡ್  ಎಂದು ನಕಲಿ ಕಂಪನಿ ಯನ್ನು ಸೃಷ್ಠಿಸಿದ್ದಾನೆ. ಶೇರು ಮಾರುಕಟ್ಟೆಯಲ್ಲಿ  ಬಂಡವಾಳ ಹೂಡಿದರೆ ಕೆಲವೇ ದಿನಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಎಂದು ನಂಬಿಸಿ 183 ಜನರಿಂದ ಸುಮಾರು ನಾಲ್ಕವರೆ ಕೋಟಿಯಷ್ಟು ಹಣವನ್ನು ವಸೂಲಿ ಮಾಡಿ ವಂಚನೆ ಮಾಡಿದ್ದಾನೆ.
ಮೊದಲಿಗೆ ಸಿರುಗುಪ್ಪದಲ್ಲಿ ಕಚೇರಿಯೊಂದನ್ನು ಸ್ಥಾಪಿಸಿ, ಬೆಂಗಳೂರಿನಲ್ಲೂ ದೊಡ್ಡದಾದ ಷೇರು ಮಾರುಕಟ್ಟೆ ಕಂಪನಿ ಮತ್ತು ರಿಯಲ್ ಎಸ್ಟೇಟ್ ಬಿಜಿನೆಸ್ ಇದೆ ಎಂದು ಜನ ರನ್ನು ನಂಬಿಸಿದ್ದಾನೆ. ಇದಕ್ಕೆ ಸಂಬಂಧಿಸದಂತೆ ಕೆಲ ಬಾಂಡ್ ಗಳನ್ನು ಜನರಿಗೆ ನೀಡಿದ್ದು, ಈತನ ನಾಟಕದ ಮಾತಿಗೆ ಗ್ರಾಮೀಣ ಭಾಗದ ಮತ್ತು ಒಂದೇ ಜನಾಂಗದ ಜನದೇ ಹೆಚ್ಚಾಗಿರುವುದು ವಿಶೇಷ ವಾಗಿದೆ. ಈ ಮೋಸದಾಟಕ್ಕೆ ಕೂಡಿಟ್ಟ ಹಣವನ್ನು ಮಹಿಳೆ ಯರು ಕೂಡ ಕಟ್ಟಿ ನಷ್ಟಕ್ಕೊಳಗಾಗಿದ್ದಾರೆ. ವಂಚನೆಗೊಳಗಾದ ವರೆಲ್ಲರೂ ಸಿರುಗುಪ್ಪ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.  ಇದೇ ಕಾರಣಕ್ಕೆ ಮೋಸ ಹೋಗುವ ವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ  ಎಂದು ಹೇಳುತ್ತಾರೆ.

Comments are closed.

Social Media Auto Publish Powered By : XYZScripts.com