ಆರ್‍ಜಿವಿ ನಿರ್ದೇಶನದಲ್ಲಿ ಎನ್‍ಟಿಆರ್ ಬಯೋಪಿಕ್..ಎನ್‍ಟಿಆರ್ ವಿಲನ್ ಯಾರು !?

ಕೆಲದಿನಗಳ ಹಿಂದೆ ನಂದಮೂರಿ ಬಾಲಕೃಷ್ಣ, ತಮ್ಮ ತಂದೆ ದಿವಂಗತ ನಂದಮೂರಿ ತಾರಕ ರಾಮರಾವು ಜೀವನ ಚರಿತ್ರೆಯನ್ನ ಸಿನಿಮಾ ಮಾಡೋದಾಗಿ ಅನೌನ್ಸ್ ಮಾಡಿದ್ರು. ಅಷ್ಟೆ ಅಲ್ಲ ಆ ಚಿತ್ರದಲ್ಲಿ ತಾವೇ ಎನ್‍ಟಿಆರ್ ಪಾತ್ರದಲ್ಲಿ ನಟಿಸೋದಾಗಿ ಹೇಳಿದ್ರು. ಆ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳೋದಾಗಿ ತಿಳಿಸಿದ್ರು. ಇದೀಗ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಬಯೋಪಿಕ್ ಅನ್ನ ತೆರೆಗೆ ತರ್ತಾರೆ ಅನ್ನೋ ಸುದ್ದಿ ಬಂದಿದೆ. ಈ ವಿಚಾರ ಕೇಳಿ ಟಾಲಿವುಡ್ ದಂಗಾಗಿದೆ.

ಮಹಾನ್ ನಟ, ರಾಜಕಾರಣಿ ದಿವಂಗತ ನಂದಮೂರಿ ತಾರಕ ರಾಮಾರಾವ್. ಇವರ ಸಿನಿಮಾ ಮತ್ತು ರಾಜಕೀಯ ಜೀವನ ಒಂದು ರೋಚಕ ಕಹಾನಿ. ಇವರ ಜೀವ ಚರಿತ್ರೆಯಲ್ಲಿ ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳು ಸಿಗುತ್ತವೆ. ಸದ್ಯ ವರ್ಮಾ ಈ ಬಯೋಪಿಕ್‍ಗೆ ಆಕ್ಷನ್ ಕಟ್ ಹೇಳ್ತಾರೆ ಅನ್ನೋದು ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ವಿವಾದಾತ್ಮಕ ಅಂಶಗಳನ್ನ ತೆರೆಗೆ ತೋರೊದ್ರಲ್ಲಿ ಆರ್‍ಜಿವಿ ನಿಸ್ಸೀಮರು. ಇನ್ನೂ ಎನ್‍ಟಿಆರ್ ರಾಜಕೀಯ ಜೀವನದಲ್ಲಿ ಜನಸಾಮಾನ್ಯರಿಗೆ ಗೊತ್ತಿಲ್ಲದ ಸಾಕಷ್ಟು ರಹಸ್ಯಗಳಿವೆ. ಅದನ್ನೆಲ್ಲಾ ವರ್ಮಾ ತರೆಮೇಲೆ ತರ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

ಎನ್‍ಟಿಆರ್ ಬಯೋಪಿಕ್‍ನಲ್ಲಿ ಅವರ ಶತ್ರುಗಳು ಯಾರು, ನಂಬಿಕೆ ದ್ರೋಹಿಗಳು ಯಾರು, ಯಾರಿಗೂ ಗೊತ್ತಿಲ್ಲದ ಕಾಂಟ್ರವರ್ಸಿಗಳ ಹಿಂದಿನ ಅಸಲಿ ಕಾಂಟ್ರವರ್ಸಿ ಏನು ಅನ್ನೋದನ್ನೆಲ್ಲಾ ತೆಲುಗು ಜನತೆಗೆ ಗೊತ್ತಾಗುವಂತೆ ಮಾಡ್ತೀನಿ ಅಂತ ವರ್ಮಾ ತಿಳಿಸಿದ್ದಾರೆ. ಹಾಗಾದ್ರೆ ವರ್ಮಾ ಚಿತ್ರದಲ್ಲಿ ಯಾರನ್ನ ವಿಲನ್ ಆಗಿ ತೋರಿಸ್ತಾರೆ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಯಾಕಂದ್ರೆ ಎನ್‍ಟಿಆರ್, ಅವ್ರ ಅಳಿಯ ಚಂದ್ರಬಾಬು ನಾಯ್ಡು ಕೊನೆಯ ದಿನಗಳಲ್ಲಿ ತಮ್ಮ ಮಾವನಿಗೆ ಮೋಸ ಮಾಡಿದ್ರು ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ಚಂದ್ರಬಾಬು ನಾಯ್ಡು ಮತ್ತು ಬಾಲಕೃಷ್ಣ ತುಂಬಾ ಆತ್ಮೀಯರಾಗಿದ್ದಾರೆ. ಬಾಲಕೃಷ್ಣ ಹೀರೋ ಅಂದ್ಮೇಲೆ ಚಂದ್ರಬಾಬು ನಾಯ್ಡು ಅವರನ್ನ ವಿಲನ್ ಆಗಿ ತೋರಿಸೋಕೆ ಸಾಧ್ಯವಿಲ್ಲ. ಸೋ ವರ್ಮಾ ಎನ್‍ಟಿಆರ್ ಪತ್ನಿ ಲಕ್ಷ್ಮೀ ಪಾರ್ವತಿ ಅವರನ್ನ ಈ ಬಯೋಪಿಕ್‍ನಲ್ಲಿ ವಿಲನ್ ಆಗಿ ತೋರಿಸ್ತಾರಾ ಅನ್ನೋ ಚರ್ಚೆ ಆಂಧ್ರ ಪ್ರದೇಶದಲ್ಲಿ ನಡೀತಿದೆ.

Comments are closed.