ಸಿಂಪಲ್ ಆಗಿ ಶ್ವೇತಾ ಶ್ರೀವಾತ್ಸವ್ ಳ ಬೆಲ್ಲಿ ಪೇಂಟಿಂಗ್ ನ ಲವ್ ಸ್ಟೋರಿ ….!

ತಾಯ್ತನ ಪ್ರತಿಯೊಬ್ಬ ಹೆಣ್ಣಿನ ಬದುಕಿನ ಸುಂದರ ಸುಮಧುರ ಕಾಲ. ಈ ದಿನಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕಳೆಯಬೇಕಾಗಿಲ್ಲ, ಬದಲಿಗೆ ಸಂತಸದಿಂದ ಸಂಭ್ರಮಿಸಬೇಕು. ಈ ಮಾತುಗಳನ್ನು ಹೇಳೋದು ಮಾತ್ರವಲ್ಲದೇ ತಾವೂ ಅನುಭವಿಸ್ತಿದ್ದಾರೆ ನಟಿ ಶ್ವೇತಾ ಶ್ರೀವಾತ್ಸವ್.


ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಮನೆಮಾತಾಗಿರುವ ಶ್ವೇತಾ ಈಗ ತಾಯ್ತನದ ಹೊಸ್ತಿಲಲ್ಲಿದ್ದಾರೆ. ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಮಿಂಚಿದ್ದ ಈಕೆ ಈಗ ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು ಸುದ್ದಿಯಲ್ಲಿದ್ದಾರೆ.
ಅಂದ್ಹಾಗೆ ಶ್ವೇತಾ ಈಗ 37 ವಾರಗಳ ತುಂಬು ಗರ್ಭಿಣಿ. ಈ ಸಂದರ್ಭದಲ್ಲಿ ಹೊಟ್ಟೆಯೊಳಗಿನ ಪುಟ್ಟ ಜೀವವನ್ನು ಸ್ವಾಗತಿಸಲು ಪತಿ ಅಮಿತ್ ಶ್ರೀವಾತ್ಸವ್ ಕಲೆಯ ವಿಭಿನ್ನ ದಾರಿಯನ್ನು ಹುಡುಕಿದ್ದಾರೆ. ಖ್ಯಾತ ಕಲಾವಿದ ಬಾದಲ್ ನಂಜುಂಡಸ್ವಾಮಿಯವರನ್ನು ಕರೆಸಿ ಶ್ವೇತಾ ಹೊಟ್ಟೆಯ ಮೇಲೆ ಪುಟ್ಟ ದೇವತೆಯ ಚಿತ್ರ ಬಿಡಿಸಿದ್ದಾರೆ.
ಪುಟಾಣಿ ಏಂಜಲ್ ಮುಡುಡಿ ಮಲಗಿದಂತಿರುವ ಈ ಮುದ್ದಾದ ಚಿತ್ರಗಳು ಶ್ವೇತಾ ಹೊಟ್ಟೆಯ ಮೇಲೆ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ರಾರಾಜಿಸುತ್ತಿವೆ. ಈ ವಿಭಿನ್ನ ಬಗೆಯ ಕಲೆ ಶ್ವೇತಾಗೆ ಬಹಳ ಖುಷಿ ಕೊಟ್ಟಿತಂತೆ.


ಸುಮಾರು 4 ಗಂಟೆಗಳ ಕಾಲ ನಡೆದ ಈ ಬೆಲ್ಲಿ ಪೇಂಟಿಂಗ್ ಬಹಳ ಹೊಸತು. ಬಸುರಿ ಹೆಣ್ಣಿಗೆ ತೊಂದರೆಯಾಗದಂತೆ ನವಿರಾಗಿ, ಚರ್ಮಕ್ಕೆ ಹಾನಿ ಮಾಡದ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಚಿತ್ರಗಳನ್ನು ರಚಿಸಿದ್ದಾರೆ ಕಲಾವಿದ ಬಾದಲ್. ತಾಯ್ತನದ ಈ ಘಳಿಗೆಗಳನ್ನು ಅತ್ಯಂತ ಸಂತಸದಿಂದ ಕಳೆಯುತ್ತಿರುವ ಶ್ವೇತಾ ಮತ್ತವರ ಪತಿ ಅಮಿತ್ ಶೀಘ್ರದಲ್ಲೇ ಬರಲಿರುವ ಮಗುವಿಗಾಗಿ ಸಂತಸದಿಂದ ಕಾಯ್ತಿದ್ದಾರೆ.

simple aagi shwetha la  belly painting na love story

Comments are closed.

Social Media Auto Publish Powered By : XYZScripts.com