ಮಗಧೀರ ಚೆಲುವೆಯನ್ನ ಹಿಂಡಿ ಹಿಪ್ಪೆ ಮಾಡಿದ ಬ್ರಹ್ಮಾನಂದಂ..ಫೋಟೊ ವೈರಲ್!

ಹಾಸ್ಯ ಕಲಾವಿದ ಬ್ರಹ್ಮಾನಂದಂ ಕಾಮಿಡಿ ಟೈಮಿಂಗ್, ಅವ್ರ ಹಾವಭಾವ ಎಂತಹವರಿಗೂ ನಗು ತರಿಸುತ್ತೆ. ಟಾಲಿವುಡ್‍ನ ಸ್ಟಾರ್ ಕಾಮಿಡಿಯನ್ ಆಗಿ ಮೆರೆಯುತ್ತಿರೋ ಬ್ರಹ್ಮಾನಂದಂ ಈಗಾಲೇ ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇವತ್ತಿಗೂ ಟಾಲಿವುಡ್‍ನ ಬಹುಬೇಡಿಕೆಯ ಹಾಸ್ಯ ಕಲಾವಿದ ಅಂದ್ರೆ ಅದು ಬ್ರಹ್ಮಾನಂದಂ. ಈ ಆಸಾಮಿ ಇದ್ದ ಕಡೆ ನಗು ಇರತ್ತೆ. ತೆರೆಮೇಲೆ ಅಷ್ಟೆ ಅಲ್ಲ. ಸದಾ ಸುತ್ತಮುತ್ತ ಇರುವವರನ್ನ ನಕ್ಕು ನಗಿಸುವ ಈ ಹಾಸ್ಯದರಸ ಇದೀಗ ಎಮ್‍ಎಲ್‍ಎ ಅನ್ನೋ ಹೊಸ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಕಲ್ಯಾಣ್ ರಾಮ್, ಕಾಜಲ್ ಅಗರ್‍ವಾಲ್ ಅಭಿನಯದ ಎಮ್‍ಎಲ್‍ಎ ಸಿನಿಮಾ ಭಾನುವಾರವಷ್ಟೆ ಸೆಟ್ಟೇರಿದೆ. ಕಲ್ಯಾಣ್ ರಾಮ್ ಅಭಿನಯದ ಲಕ್ಷ್ಮಿ ಕಲ್ಯಾಣಂ ಸಿನಿಮಾ ಮೂಲಕ ಕಾಜಲ್ ತೆಲುಗು ಚಿತ್ರರಂಗಕ್ಕೆ ಪರಿಚಿತಳಾಗಿದ್ಲು. ಹೆಚ್ಚು ಕಡಿಮೆ 10 ವರ್ಷಗಳ ನಂತ್ರ ಈ ಜೋಡಿ ಮತ್ತೆ ಜೊತೆಯಾಗಿದೆ. ಮೊದಲ ದಿನ ಕಲ್ಯಾಣ್, ಕಾಜಲ್, ಬ್ರಹ್ಮಾನಂದಂ ಕಾಣಿಸಿಕೊಂಡ ಎಮ್‍ಎಲ್‍ಎ ಚಿತ್ರದ ಒಂದಷ್ಟು ದೃಶ್ಯಗಳನ್ನ ಸೆರೆಯಿಡಿಯಲಾಯ್ತು. ಇದೇ ವೇಳೆ ಬ್ರಹ್ಮಾನಂದಂ ಮತ್ತು ಕಾಜಲ್ ಜೊತೆ ಕಲ್ಯಾಣ್ ರಾಮ್ ಒಂದು ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಈ ಫೋಟೊವನ್ನ ಕಾಜಲ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ.

ಬ್ರಹ್ಮಾನಂದಂ, ಕಾಜಲ್ ಅಗರ್‍ವಾಲ್‍ಳನ್ನ ಬಾಚಿ ತಬ್ಬಿ ಹಿಡಿದುಕೊಂಡಿರೋ ಈ ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಸೆಲ್ಫಿ ಕ್ಯಾಮರಾಗೆ ಒಂದೇ ತರಹ ಪೋಸ್ ಕೊಟ್ಟು ಕೊಟ್ಟು ಸುಸ್ತಾಗಿರೋ ಮಂದಿ, ಈಗ ಸೆಲ್ಫಿ ಅಂದಾಕ್ಷಣ ಚಿತ್ರವಿಚಿತ್ರವಾಗಿ ಪೋಸ್ ಕೊಡ್ತಾರೆ. ಅದೇ ರೀತಿ ಬ್ರಹ್ಮಾನಂದಂ ಸಹ ಮಗಧೀರ ಚೆಲುವೆಯನ್ನ ಅಪ್ಪಿ, ಆಕೆಯ ಭುಜದ ಮೇಲೆ ತಲೆಯಿಟ್ಟು ಡಿಫ್‍ರೆಂಟಾಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನ ಕಾಜಲ್ ತನ್ನ ಇನ್‍ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಫೋಟೊ ವೈರಲ್ಲಾಗಿದೆ.

Comments are closed.

Social Media Auto Publish Powered By : XYZScripts.com