ರಾಮಗಢದಲ್ಲಿ ಮಾಂಸದ ವ್ಯಾಪಾರಿ ಹತ್ಯೆ: ಏಳು ಮಂದಿ ಆರೋಪಿಗಳ ಬಂಧನ

ರಾಮಗಢ: ಜಿಲ್ಲೆಯಲ್ಲಿ ಮಾಂಸದ ವ್ಯಾಪಾರಿಯೊಬ್ಬನ  ಹತ್ಯೆ ನಡೆದಿತ್ತು. ಈ ಹತ್ಯೆಯಲ್ಲಿ ಭಾಗಿಯಾಗಿರುವ ಸಂಬಂಧ ಏಳು ಜನ ಸ್ಥಳೀಯ ಬಿಜೆಪಿ ಮುಖಂಡರನ್ನು ಬಂಧಿಸಲಾಗಿತ್ತು.

ಈ ಸಂಬಂಧ ರಾಮಗಢ ಜಿಲ್ಲಾ ಪೊಲೀಸ್‍ ಅಧೀಕ್ಷಕ ಕಿಶೋರ್‍ ಕೌಶಲ್‍ ಮಾತನಾಡಿ, ಹತ್ಯೆ ಪ್ರಕರಣ ಮಾತ್ರವಲ್ಲದೇ ಇನ್ನೂ ಒಂದು ಆರೋಪದ ಮೇಲೆ ಬಿಜೆಪಿ ನಾಯಕ ನಿತ್ಯಾನಂದ್‍ ಮಹಾತೊ ಅವರನ್ನು ರವಿವಾರ ಬಂಧಿಸಲಾಗಿದೆ. ಮುಖ್ಯ ಆರೋಪಿ ಛೋಟು ರಾಣಾ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ಹೇಳಿದರು.

40 ವರ್ಷದ ಮಾಂಸದ ವ್ಯಾಪಾರಿ ಹಜಾರಿಬಾಗ್‍ ಜಿಲ್ಲೆಯ ನಿವಾಸಿ ಮಾನ್ವಾ ತನ್ನ ವಾಹನದಲ್ಲಿ ದನಗಳನ್ನು ಸಾಗಿಸುತ್ತಿದ್ದಾನೆ ಎಂದು ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪೊಂದು ಆತನ ಮೇಲೆ ದಾಳಿ ನಡೆಸಿ ಹತ್ಯೆಗೈದಿತ್ತು.

ಈ ಸಂಬಂಧ ಜಿಲ್ಲೆಯ ಎಸ್‍ಪಿ ರಾಜೇಶ್ವರಿ.ಬಿ ಮಾತನಾಡಿ, ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ವೀಡಿಯೋ ಮತ್ತು ಫೋಟೋಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬನಾಗಿದ್ದ ಛೋಟು ರಾಣಾ ರಾಮಗಢ ನ್ಯಾಯಾಲಯದಲ್ಲಿ ಶರಣಾಗತನಾಗಿದ್ದಾನೆ. ಇನ್ನು ಪ್ರಕರಣದ ನಂತರ ತಲೆಮರೆಸಿಕೊಂಡಿರುವ ದೀಪಕ್‍ ಮಿಶ್ರಾ ಮತ್ತು ಛೋಟು ವರ್ಮಾ ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತನಿಖೆ ಹೊರತುಪಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಗೊಮಡಿರುವ ವೀಡಿಯೋಗಳು, ಫೋಟೋಗಳನ್ನು ಪರಿಶೀಲಿಸಲು ವಿಶೇಷ ತಂಡವನ್ನು ರಚಿಸಲಾಗಿದೆ.

ಪೊಲೀಸ್‍ ಉಪ ವಿಭಾಗ ಆಯುಕ್ತ ಮಾತನಾಡಿ, 144 ಸಿಆರ್‍ಪಿಸಿ ಅಡಿಯಲ್ಲಿ ರಾಮಗಢ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಉಪವಿಭಾಗೀಯ ಅಧಿಕಾರಿ ಅನಂತ್‍ಕುಮಾರ್‍ ಅವರ ಸೂಚನೆ ಮೇರೆಗೆ ನಿಷೇಧಾಜ್ಞೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು.

ಈ ವೇಳೆ ಹಜಾರಿಭಾಗ್‍ ಜಿಲ್ಲಗೆ ಭೇಟಿ ನೀಡಿ ಮೃತ ಮಾನ್ವಾ ಹೆಂಡತಿ ಮರಿಯಂ ಖಾಟೂನ್‍ ಅವರಿಗೆ ಎರಡು ಲಕ್ಷ ರೂ. ಚೆಕ್‍ ನೀಡಲಾಗಿದೆ ಎಂದು ಹೇಳಿದರು.

Comments are closed.

Social Media Auto Publish Powered By : XYZScripts.com