ಯುವಕರಿಗೆ ಸ್ಫೂರ್ತಿ ತುಂಬಲು ಬರಹಗಾರರಾದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ದೇಶದ ಪ್ರಧಾನಿಯಾಗಿರುವ ಮೋದಿ ಈಗ ಬರಹಗಾರರಾಗುತ್ತಿದ್ದಾರೆ. ಯುವಕರಿಗಾಗಿ ಪುಸ್ತಕವೊಂದನ್ನು ಬರೆಯುತ್ತಿದ್ದು, ಪ್ರಮುಖವಾಗಿ ಪರೀಕ್ಷೆಯ ಒತ್ತಡದಿಂದ ಪಾರಾಗುವುದು ಹೇಗೆ ಹಾಗೂ ಪರೀಕ್ಷೆ ಎಂಬ ಭಯವನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಪುಸ್ತಕದಲ್ಲಿ ಮಾಹಿತಿ ಲಭ್ಯವಾಗಲಿದೆ.

ಈ ಪುಸ್ತಕವನ್ನು ಪೆಂಗ್ವಿನ್‌ ರ್ಯಾಂಡಮ್‌  ಹೌಸ್‌ (ಪಿಆರ್ ಎಚ್‌) ಪ್ರಕಟ ಮಾಡುತ್ತಿದ್ದು, ಬಹುಭಾಷೆಯಲ್ಲಿ ಪ್ರಕಟಗೊಳ್ಳುತ್ತಿದೆ. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಗದರ್ಶನ ನೀಡುವ ಪುಸ್ತಕ ಇದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಪುಸ್ತಕ ದೊರೆಯುವುದಾಗಿ ಪ್ರಕಾಶಕರು ತಿಳಿಸಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಯುವಕರಿಗಾಗಿ ಪುಸ್ತಕ ಬರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪುಸ್ತಕ ಪ್ರಕಟಣೆಗೆ  ಬ್ಲೂಕಾರ್ಟ್‌ ಡಿಜಿಟಲ್ ಫೌಂಡೇಶನ್‌, ತಾಂತ್ರಿಕವಾಗಿ ಸಹಾಯ ಮಾಡಿದ್ದು, ಯುವಕರಿಗೆ ಹೇಳಬೇಕಾದ ಮಾಹಿತಿಗಳನ್ನು ಪ್ರಧಾನಿ ಮೋದಿ ಈ ಪುಸ್ತಕದಲ್ಲಿ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com