ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದಿದ್ದ ವಿನಯ್ ಪ್ರಧಾನ್, ಪಕ್ಷದಿಂದ ಹೊರಹಾಕಿದ ಕಾಂಗ್ರೆಸ್..!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ವಾಟ್ಸಪ್ ಗ್ರೂಪ್ ನಲ್ಲಿ ‘ಪಪ್ಪು’ ಎಂದು ಸಂಬೋಧಿಸಿದ್ದಕ್ಕೆ ಉತ್ತರ ಪ್ರದೇಶದ ಮೀರಟ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನಯ್ ಪ್ರಧಾನ್ ಅವರನ್ನು ಪಕ್ಷದಿಂದ 6 ವರ್ಷ ಹೊರಹಾಕಲಾಗಿದೆ. ಇದೇ ಕಾರಣಕ್ಕಾಗಿ ಪ್ರಧಾನ್ ಅವರನ್ನು ಕಳೆದ ತಿಂಗಳು ಕೇವಲ ಅಮಾನತುಗೊಳಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ನಿಯಮಗಳನ್ನು ಉಲ್ಲಂಘನೆ ಮಾಡಿ ಆರೋಪದ ಮೇಲೆ ವಿನಯ್ ಪ್ರಧಾನ್ ಅವರನ್ನು ಉತ್ತರಪ್ರದೇಶ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಾಮಕೃಷ್ಣ ದ್ವಿವೇದಿ ಹೊರಹಾಕಿದ್ದಾರೆಂದು, ಕಾಂಗ್ರೆಸ್ ವಕ್ತಾರ ದ್ವಿಜೇಂದ್ರ ತ್ರಿಪಾಠಿ ತಿಳಿಸಿದ್ದಾರೆ.

ಜೂನ್ 14 ರಂದು ಕಾಂಗ್ರೆಸ್ ಸದಸ್ಯರಿರುವ ವಾಟ್ಸಾಪ್ ಗ್ರೂಪ್ ನಲ್ಲಿ ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಸಂಬೋಧಿಸಿದ್ದರು. ಈ ವಿಷಯ ತಿಳಿದ ನಂತರ ಪಕ್ಷದ ಮುಖ್ಯಸ್ಥ ರಾಜ್ ಬಬ್ಬರ್, ವಿನಯ್ ಪ್ರಧಾನ್ ಅವರನ್ನು ಅಧಿಕಾರದಿಂದ ಅಮಾನತುಗೊಳಿಸಿದ್ದರು.

Comments are closed.

Social Media Auto Publish Powered By : XYZScripts.com