ಶಬ್ದ ಮಾಲಿನ್ಯಕ್ಕೆ ಮಸೀದಿ ಕಾರಣ? : ವಿವಾದ ಹುಟ್ಟಿಸಿದ ಪಠ್ಯಕ್ರಮ

ದೆಹಲಿ: ಐಸಿಎಸ್‌ಇಯ ಆರನೇ ತರಗತಿ ಪಠ್ಯಕ್ರಮದಲ್ಲಿ ವಾಯುಮಾಲಿನ್ಯಕ್ಕೆ ಮಸೀದಿಯನ್ನು ಉದಾಹರಿಸಲಾಗಿದ್ದು, ಇದು ಭಾರೀ ಗದ್ದಲ ಎಬ್ಬಿಸಿದೆ. ವಿಜ್ಞಾನ ಪುಸ್ತಕದಲ್ಲಿ ಶಬ್ದ ಮಾಲಿನ್ಯದ ಪರಿಣಾಮಗಳ ಕುರಿತ ಪಠ್ಯದಲ್ಲಿ ರೈಲು, ಕಾರು, ವಿಮಾನ ಹಾಗೂ ಮಸೀದಿಯ ಮಧ್ಯೆ ಯುವಕನೊಬ್ಬ ಕಿವಿ ಮುಚ್ಚಿಕೊಂಡು ನಿಂತಿರುವ ಚಿತ್ರವಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಇಂಡಿಯನ್‌ ಸ್ಕೂಲ್‌ ಆಫ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್‌ ಕೌನ್ಸಿಲ್‌ನ ಕಾರ್ಯದರ್ಶಿ ಗೆರ್ರಿ ಅರಥೂನ್ ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಯಾವುದೇ ಪುಸ್ತಕದಲ್ಲಿ ಅವಹೇಳನಕಾರಿ ವಿಷಯಗಳನ್ನು ಕಲಿಸುತ್ತಿದ್ದಲ್ಲಿ ಅಥವಾ ಪ್ರಕಟಿಸಿದಲ್ಲಿ ಅದು ಶಾಲೆ ಹಾಗೂ ಪಬ್ಲಿಕೇಶನ್‌ ಅವರ ಜವಾಬ್ದಾರಿಯಾಗಿರುತ್ತದೆ. ಇಂತಹ ತಪ್ಪುಗಳು ನಡೆಯದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.

ಮಸೀದಿಯನ್ನು ಅವಹೇಳನ ಮಾಡುತ್ತಿರುವ ಪಠ್ಯವನ್ನು ಕೂಡಲೆ ತೆಗೆಯುವಂತೆ ಆಗ್ರಹಿಸಿ, ಆನ್‌ ಲೈನ್‌ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈ ಕುರಿತು ಪ್ರಕಾಶಕರು ಕ್ಷಮೆ ಕೋರಿದ್ದು, ಮುಂದಿನ ಆವೃತ್ತಿಯಲ್ಲಿ ಇದನ್ನು ತೆಗೆಯುವುದಾಗಿ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಸೀದಿಯಲ್ಲಿ ಮಾಡುವ ಅಜಾನ್‌ನಿಂದ ತೊಂದರೆಯಾಗುತ್ತಿದೆ ಎಂದು ಗಾಯಕ ಸೋನು ನಿಗಮ್ ಹೇಳಿದ್ದರು. ಈ ಹೇಳಿಕೆ ಭಾರೀ ಗೊಂದಲ ಸೃಷ್ಟಿಸಿತ್ತು.

Comments are closed.

Social Media Auto Publish Powered By : XYZScripts.com