ಬೆಂಗಳೂರು : ಬೇಲಿಯೇ ಎದ್ದು ಹೊಲ ಮೇಯ್ದಂತೆ, ಸೆಕ್ಯೂರಿಟಿ ಗಾರ್ಡ್ ನಿಂದ ATM ಕಳುವಿಗೆ ಯತ್ನ

ರಾಜ್ಯ ರಾಜಧಾನಿಯಲ್ಲಿ ಎರಡು ಎಟಿಎಂ ಕಳುವಿಗೆ ವಿಫಲ ಯತ್ನ ನಡೆದಿದೆ. ಆಗ್ನೇಯ ವಿಭಾಗದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ತಡವಾಗಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದು ಪ್ರಕರಣ ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಚ್ಎಸ್ಆರ್ ಲೇಔಟ್ ನ 2 ನೇ ಸೆಕ್ಟರ್ನಲ್ಲಿರುವ ಯುನಿಯನ್ ಬ್ಯಾಂಕ್ ಎಟಿಎಂನಲ್ಲಿ  ಸೆಕ್ಯೂರಿಟಿ ಗಾರ್ಡ್ ನಿಂದಲೇ ಕಳುವಿಗೆ ಯತ್ನ ನಡೆದಿದೆ.

ಎಟಿಎಂನ ಸೆಕ್ಯೂರಿಟಿಯಾಗಿ ನೇಮಕವಾದ ದಿನವೇ ಸೆಕ್ಯೂರಿಟಿ ಗಾರ್ಡ್ ಬಾಬುದಾಸ್ ನಿಂದ ಕೃತ್ಯ ನಡೆದಿದ್ದು, ಘಟನೆ ಬಳಿಕ ಆರೋಪಿ ಸಿಸಿಟಿವಿ ಕೇಬಲ್ ಮತ್ತು ಎಟಿಎಂ ಬಾಗಿಲಿನ ಗಾಜು ಜಖಂ ಗೊಳಿಸಿದ್ದಾನೆ.

ಕೋರಮಂಗಲದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ. ಕೋರಮಂಗಲದ 3 ನೇ ಬ್ಲಾಕ್ನಲ್ಲಿರುವ ಸ್ಟೇಟ್ ಬ್ಯಾಂಕ್ನ ಎಟಿಎಂನಲ್ಲಿ ಮಾಸ್ಕ್ ಧರಿಸಿ ಕೈಯಲ್ಲಿ ರಾಡ್ ಹಿಡಿದು ಎಟಿಎಂ ಕಳುವಿಗೆ ವಿಫಲ ಯತ್ನಿಸಲಾಗಿದೆ.

One thought on “ಬೆಂಗಳೂರು : ಬೇಲಿಯೇ ಎದ್ದು ಹೊಲ ಮೇಯ್ದಂತೆ, ಸೆಕ್ಯೂರಿಟಿ ಗಾರ್ಡ್ ನಿಂದ ATM ಕಳುವಿಗೆ ಯತ್ನ

Comments are closed.

Social Media Auto Publish Powered By : XYZScripts.com