ಬಾಲಕನನ್ನು ಮ್ಯಾನ್‍ಹೋಲ್‍ಗಿಳಿಸಿದ್ದ ಪ್ರಕರಣ: ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್‍

ಹುಬ್ಬಳ್ಳಿ: ಇಲ್ಲಿನ ಮ್ಯಾನ್‍ಹೋಲ್‍ ಒಂದರಲ್ಲಿ ಬಾಲಕನನ್ನು ಇಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ನೋಟಿಸ್‍ ಜಾರಿ ಮಾಡಿದೆ.

ಪ್ರಕರಣ ಮತ್ತು ನೋಟಿಸ್‍ ಜಾರಿಯಾಗಿದ್ದರಿಂದ ಮುಜುಗರಕ್ಕೆ ಒಳಗಾದ ಪಾಲಿಕೆ ಅಧಿಕಾರಿಗಳು ಈಗ ಗುತ್ತಿಗೆದಾರರನ್ನು ಹುಡುಕಾಡುತ್ತಿದ್ದಾರೆ.

ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಮ್ಯಾನ್‍ಹೋಲ್ ನಲ್ಲಿ ಶುಕ್ರವಾರ ಬಾಲಕನನ್ನು ಇಳಿಸಿ, ಸ್ವಚ್ಛತೆ ಕೆಲಸ ಮಾಡಿಸಲಾಗಿತ್ತು. ಮ್ಯಾನ್‍ಹೋಲ್‍ ನಲ್ಲಿ ಕಾರ್ಮಿಕರನ್ನು ಇಳಿಸಬಾರದು ಎಂಬ ನಿಯಮವನ್ನು ಗಾಳಿಗೆ ತೂರಿ ಅಪ್ರಾಪ್ತ ಬಾಲಕನನ್ನು ಮ್ಯಾನ್‍ಹೋಲ್‍ ಸ್ವಚ್ಛಗೊಳಿಸಲು ಬಳಸಿಕೊಂಡಿರುವುದನ್ನು ಪ್ರಶ್ನಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗ ಪಾಲಿಕೆಗೆ ನೊಟೀಸ್ ಜಾರಿ ಮಾಡಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಪಾಲಿಕೆ ಅಧಿಕಾರಿಗಳಿಗೆ ಖುದ್ದು ಕರೆ ಮಾಡಿ ಮಾಹಿತಿ ಕೇಳಿ ನೋಟಿಸ್‍ ನೀಡಿರುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪಾಲಿಕೆ ಆಯುಕ್ತರು ಮಾತನಾಡಿ, ಬಾಲಕನಿಂದ ಸ್ಸ್ವಚ್ಛಗೊಳಿಸಿದ್ದು ಯಾರು ಎಂಬ ಮಾಹಿತಿ ದೊರೆತಿಲ್ಲ. ಮಾಹಿತಿ ನಂತರ ಅವರ ಮೇಲೆ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com