ಬೆಂಗಳೂರು : ಪೋಲೀಸರ ಬಲೆಗೆ ಬೈಕ್ ಕಳ್ಳರ ಗ್ಯಾಂಗ್ , 28 ಬೆಲೆಬಾಳುವ ಬೈಕ್ ವಶ..!

ಬೆಂಗಳೂರು : ಪರಪ್ಪನ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ ಐಷಾರಾಮಿ ಜೀವನಕ್ಕಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಭು, ಅರುಣ್ ಸಾಯಿ, ಕಾರ್ತಿಕ್ ಬಂಧಿತ ಆರೋಪಿಗಳು. ಬೆಳಿಗ್ಗೆ ಮೂರರಿಂದ ಆರು ಗಂಟೆಯ ವೇಳೆ ಬೆಲೆಬಾಳುವ ಬೈಕ್ ಗಳ ಲಾಕನ್ನ ಮುರಿದು ಕಳ್ಳತನ ಮಾಡುತ್ತಿದ್ದರು. ಅಂತರ್ ರಾಜ್ಯದಲ್ಲೂ ತಮ್ಮ ಕೈಚಳಕ ತೋರಿದ್ದರು.

 

 

ಆರೋಪಿ ಪ್ರಭು ಡಿಪ್ಲೊಮಾ ಇಂಜಿನಿಯರಿಂಗ್ ಮುಗಿಸಿದ್ದ. ಉಳಿದ ಆರೋಪಿಗಳು ಬಿಕಾಂ ಹಾಗೂ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಗ್ಯಾಂಗ್ ನವರು ಮೋಜು-ಮಸ್ತಿಗಾಗಿ ಕಳ್ಳತನಕ್ಕೆ ಇಳಿದಿದ್ದರು. ಬಂಧಿತರಿಂದ ಮೂವತ್ತು ಲಕ್ಷ ರೂಪಾಯಿ ಬೆಲೆಬಾಳುವ ೨೮ ಬೆಲೆಬಾಳುವ ಬೈಕ್ ಗಳನ್ನು ಪೋಲೀಸರು ವಶಕ್ಕೆ ಪಡೆದಿದ್ಧಾರೆ.

Comments are closed.

Social Media Auto Publish Powered By : XYZScripts.com