ಬೆಳಗಾವಿ : ಬಾರ್ ಬಂದ್ ಗೆ ಒತ್ತಾಯಿಸಿ, ವೈನ್ ಬಾಟಲ್ ಎಸೆದು ಪ್ರತಿಭಟಿಸಿದ ಗ್ರಾಮಸ್ಥರು..!

ಬೆಳಗಾವಿ : ಹೆದ್ದಾರಿ ಪಕ್ಕದ ವೈನ್ ಬಂದ್ ಮಾಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು. ಜುಲೈ 1 ರ ವರೆಗೆ ಕಾದು ಕುಳಿತಿದ್ದ ಗ್ರಾಮಸ್ಥರಿಂದ ವೈನ್ ಶಾಪ್ ಗೆ ನುಗ್ಗಿ ಮಧ್ಯದ ಬಾಟಲಿಗಳನ್ನ ಹೊರ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಘಟನೆ ನಡೆದಿದೆ. ಮಹಿಳೆಯರು ಬಾಟಲಿಗಳನ್ನು ಹೊರಕ್ಕೆ ಎಸೆದು ಬಾರ್ ಬಂದ್ ಮಾಡಿಸಲು ಒತ್ತಾಯಪಡಿಸಿದರು. ಕಳೆದ ಹಲವು ದಿನಗಳಿಂದ ವ್ಯಾಪಾರ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜುಲೈ ಒಂದರಂದು ಬಂದ್ ಆಗದೆ ಇದ್ದದ್ದಕ್ಕೆ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.

Comments are closed.

Social Media Auto Publish Powered By : XYZScripts.com