ಬಂಡಿ ರಮೇಶ್ ಕೊಲೆ ಪ್ರಕರಣ: 13 ಆರೋಪಿಗಳ ಬಂಧಿಸಿದ ಪೊಲೀಸರು

ಬಳ್ಳಾರಿ: ಬಳ್ಳಾರಿಯ ಗುಗ್ಗರ ಹಟ್ಟಿ ಬಳಿ ಜೂನ್ 22 ರಂದು ನಡೆದ ರೌಡಿಶೀಟರ್ ಬಂಡಿ‌ ರಮೇಶ್ ಕೊಲೆ ಪ್ರಕರಣ‌ ಸಂಬಂಧ ಮೂವರು ಮಹಿಳೆಯರು ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ. ಬಳ್ಳಾರಿ ಗ್ರಾಮಾಂತರ ಪೋಲಿಸರು ಕಾರ್ಯಾಚರಣೆ ನಡೆಸಿ ಕೊಲೆ ಪ್ರಕರಣದ ಪ್ರಮುಖ ರೂವಾರಿಗಳಾದ ಕೊಟ್ಟಾಲಪಲ್ಲಿಯ ಜಗ್ಗ ಮಾರೆಣ್ಣ, ಮಲ್ಲಿ, ಸೂರಿ, ಪವನ್, ಕಲ್ಯಾಣ್, ಹರಿ, ಮಲ್ಲಿಕಾರ್ಜುನ, ನಾಸೀರ್, ಮಂಗಮ್ಮ, ನೀಲಮ್ಮ, ಲಕ್ಷ್ಮಿ, ವೀರೇಶ್ ರನ್ನು  ಬಂಧಿಸಿದ್ದಾರೆ.  ಸದ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಾಲ್ಕೈದು ತಿಂಗಳ ಹಿಂದೆ ಬಂಡಿ ರಮೇಶ್‌ ಹಾಗೂ ಜಗ್ಗ ಮಾರೆಣ್ಣ ಅವರ ಮಗ ಕಲ್ಯಾಣ್‌ ಎಂಬುವವರ ನಡುವೆ ಕ್ಷಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಬಂಡಿ ರಮೇಶ್, ಕಲ್ಯಾಣ್ ಗೆ ಥಳಿಸಿದ್ದ ಕಾರಣ ಪೊಲೀಸರು ಬಂಡಿ ರಮೇಶ್‌ನನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದ  ಬಂಡಿ ರಮೇಶ್ ನನ್ನು ಕಲ್ಯಾಣ್‌ ತಂದೆ ಜಗ್ಗ ಮಾರೆಣ್ಣ ಹಾಗೂ ಅವರ ತಂಡ ಕೊಚ್ಚಿ ಕೊಲೆ ಮಾಡಿದ್ದರು. ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಕೊನೆಗೂ ಮಾರೆಣ್ಣ ತಂಡದ ಸದಸ್ಯರು ಸಿಕ್ಕಿಬಿದ್ದಿದ್ದಾರೆ.

 

Comments are closed.

Social Media Auto Publish Powered By : XYZScripts.com