ಸಿಕ್ಕಿಂ ನಾಥು ಲಾ ಮೂಲಕ ಮಾನಸ ಸರೋವರ ಯಾತ್ರೆ ರದ್ದು: ಅಧಿಕೃತ ಸೂಚನೆ

ನವದೆಹಲಿ: ಸಿಕ್ಕಿಂನ ನಾಥು ಲಾ ಮೂಲಕ ಕೈಲಾಶ್‍ ಮಾನಸ ಸರೋವರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಅಧಿಕೃತ ಸೂಚನೆ ಹೊರಡಿಸಿದ್ದಾರೆ. ಕೆಲ ದಿನಗಳ ಹಿಂದೆ ಸಿನೋ-ಇಂಡಿಯನ್‍ ಗಡಿಯಲ್ಲಿ ಭಾರತೀಯ ಮತ್ತು ಚೀನಾ ಸೈನಿಕರು ಮುಖಾಮುಖಿಯಾದ ಹಿನ್ನೆಲೆಯಲ್ಲಿ ವಿವಾದಿತ ಗಡಿ ಪ್ರದೇಶದ ಮೂಲಕ ಭಾರತೀಯರ ಯಾತ್ರೆಯನ್ನು ನಿಷೇಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಆದೇಶದಿಂದ ನಾಥು ಲಾ ಮೂಲಕ ಎತ್ತರದ ಪ್ರದೇಶದ ಚಾರಣ ಹೊರಡುವುದು ಮತ್ತು ಬೆಟ್ಟದ ಮೇಲಿನ ಸೌಂದರ್ಯ ಸವಿಯ ಬಯಸಿದ್ದ 400 ಭಕ್ತರಿಗೆ ನಿರಾಸೆಯಾಗಲಿದೆ. ಅಲ್ಲದೇ ನಾಥು ಲಾ ಮೂಲಕ ಯಾತ್ರೆ ನಿಷೇಧ ಹಿನ್ನೆಲೆಯಲ್ಲಿ ಯಾತ್ರಿಗಳು ಉತ್ತರಾಖಂಡದ ಲಿಪೂಲ್ಖ್ ಸಮೀಪದ ಹಾದಿಯಿಂದ ಪ್ರಯಾಣಿಸುತ್ತಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ ಎಂಟು ಬ್ಯಾಚ್‍ಗಳು ಪ್ರಯಾಣಿಕರನ್ನು ನಾಥು ಲಾ ಮಾರ್ಗವಾಗಿ ಟಿಬೆಟ್‍ನ ಮಾನಸ ಸರೋವರಕ್ಕೆ ಕರೆದೊಯ್ದಿದ್ದವು. ಜೂನ್‍ 20ರಂದು ಮೊದಲ ಬ್ಯಾಚ್‍ ಪ್ರಯಾಣಿಸಿತ್ತು. ಜುಲೈ 31ರಂದು ಕೊನೆಯ ಬ್ಯಾಚ್‍ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಚೀನಾ ಮೊದಲ ಎರಡು ಬ್ಯಾಚ್‍ಗಳಿಗೆ ಮಾತ್ರ ವೀಸಾ ನೀಡಿದೆ ಎಂದು ತಿಳಿದು ಬಂದಿದೆ.

Comments are closed.

Social Media Auto Publish Powered By : XYZScripts.com