ಆಷಾಢ ಮಾಸ ಆರಂಭ, ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಸಾವಿರಾರು ಭಕ್ತರ ಆಗಮನ

ಮೈಸೂರು : ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಷಾಢ ಮಾಸದ ಸಂಭ್ರಮ ಆರಂಭವಾಗಿದೆ. ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಪೂಜೆಗಾಗಿ ಬೆಟ್ಟಕ್ಕೆ ಸಾವಿರಾರು ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಇಂದು ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಅಭಿಷೇಕದೊಂದಿಗೆ ಚಾಮುಂಡಿಗೆ ಮಹಾಮಂಗಳಾರತಿ ಪೂಜೆ ನಡೆಯಲಿದೆ.

       

ಶ್ವೇತವರ್ಣದ ಸೀರೆಯೊಂದಿಗೆ ಬೆಟ್ಟದ ತಾಯಿ ಚಾಮುಂಡಿ ಅಲಂಕೃತಳಾಗಿದ್ದಾಳೆ. ಸರ್ವಾಭರಣಾಲಂಕೃತ ಚಾಮುಂಡಿಯ ದರ್ಶನಕ್ಕೆ ಸಾವಿರಾರು ಭಕ್ತರು ಮುಗಿಬಿದ್ದಿದ್ದಾರೆ. ವಿವಿಧ ಬಗೆಯ ಹೂವುಗಳಿಂದ ದೇವಾಲಯ ಅಲಂಕಾರಗೊಂಡಿದೆ. ಭಕ್ತರ ದರ್ಶನಕ್ಕಾಗಿ ಪೋಲೀಸ್ ಇಲಾಖೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿದೆ. ಉಚಿತ ದರ್ಶನ ಜೊತೆಗೆ 50 ರೂ. ಹಾಗೂ 300 ರೂ. ನ ಟಿಕೇಟ್ ಪಡೆದು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Comments are closed.