ಐಸಿಸ್‌ಗೆ ಸೇರಲು ಹೊರಟಿದ್ದ 350 ಯುವಕರ ರಕ್ಷಿಸಿದ “ಆಪರೇಷನ್‌ ಪೀಜನ್‌”

ಕೊಚ್ಚಿ: ಗುಪ್ತಚರ ಇಲಾಖೆ ಹಾಗೂ ಕೇರಳ ಪೊಲೀಸರ ಸಹಯೋಗದಲ್ಲಿ ನಡೆದ ಆಪರೇಷನ್‌ ಪಿಜನ್‌ ಯಸಸ್ವಿಯಾಗಿದ್ದು,  350 ಯುವಕರನ್ನು ಐಸಿಸ್‌ ಆಕರ್ಷಣೆಯಿಂದ ಹೊರ ತರಲಾಗಿದೆ.
 ಕೇರಳದಲ್ಲಿ ಐಸಿಸ್‌ ಸಂಘಟನೆ ಬಲಗೊಳ್ಳುತ್ತಿದೆ. ಯುವಕರು ಐಸಿಸ್‌ನತ್ತ ಹೆಚ್ಚಿನ ಆಕರ್ಷಣೆಗೊಳಗಾಗುತ್ತಿದ್ದಾರೆ ಎಂಬ ಕಳವಳಕಾರಿ ಮಾಹಿತಿ 2016ರಲ್ಲಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಹಾಗೂ ಕೇರಳ ಪೊಲೀಸರು ಸದ್ದಿಲ್ಲದೆ “ಆಪರೇಷನ್‌ ಪಿಜನ್‌” ಹೆಸರಿನಲ್ಲಿ ಕಾರ್ಯತಂತ್ರ ರೂಪಿಸಿದ್ದರು.
 ಐಸಿಸ್‌ನತ್ತ ಆಕರ್ಷಿತರಾಗುತ್ತಿದ್ದ ಯುವಕರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಕಲೆ ಹಾಕಿ, ಅಂತಹವರನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದ್ದು, 350 ಯುವಕರು ಐಸಿಸ್‌ ಸಂಘಟನೆ ಸೇರುವುದನ್ನು ತಪ್ಪಿಸಲಾಗಿದೆ. ಐಸಿಸ್‌ ಸಂಘಟನೆ ಸೇರಲು ಇಚ್ಛಿಸಿದ್ದ ಎಲ್ಲರೂ ಅಕ್ಷರಸ್ಥರು ಎಂಬುದು ಆಶ್ಚರ್ಯಕರ ವಿಷಯವಾಗಿದ್ದು, ಕಾಸರಗೋಡು ಜಿಲ್ಲೆಯಲ್ಲೇ ಅತಿ ಹೆಚ್ಚಿನ ಯುವಕರು ಐಸಿಸ್‌ನತ್ತ ಪ್ರೇರೇಪಿತರಾಗಿ ಉಗ್ರ ಸಂಘಟನೆ ಸೇರಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

Comments are closed.

Social Media Auto Publish Powered By : XYZScripts.com