ಮಹಿಳಾ ಕ್ರಿಕೆಟ್ ವಿಶ್ವಕಪ್ : ಸ್ಮೃತಿ ಮಂದನಾ ಶತಕ, ಭಾರತಕ್ಕೆ ವಿಂಡೀಸ್ ವಿರುದ್ಧ 7 ವಿಕೆಟ್ ಜಯ

ಇಂಗ್ಲೆಂಡಿನ ಟಾಂಟನ್ ನಲ್ಲಿ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಪಂದ್ಯದಲ್ಲಿ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿತು. ಟಾಸ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು. ಹೇಯ್ಲಿ ಮ್ಯಾಥ್ಯೂಸ್ 43 , ಅಫಿ ಫ್ಲೆಚರ್ 36 ರನ್ ಗಳಿಸಿದರು. ಭಾರತದ ಪರ ಪೂನಮ್ ಯಾದವ್, ದೀಪ್ತಿ ಶರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 2 ವಿಕೆಟ್ ಕಬಳಿಸಿದರು.

 

 

ನಂತರ ಚೇಸ್ ಮಾಡಲು ಬಂದ ಭಾರತ ಸ್ಮೃತಿ ಮಂದನಾ (106) ಅವರ ಭರ್ಜರಿ ಶತಕ, ಹಾಗೂ ಮಿಥಾಲಿ ರಾಜ್ 46 ರನ್ ನೆರವಿನಿಂದ 42.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗೆಲುವಿನ ನಗೆ ಬೀರಿತು. ವಿಂಡೀಸ್ ಪರ ಸ್ಟಾಫನೀ ಟೇಲರ್, ಶಮಿಲಿಯಾ ಕಾನೆಲ್, ಹೇಯ್ಲಿ ಮ್ಯಾಥ್ಯೂಸ್ ತಲಾ 1 ವಿಕೆಟ್ ಕಬಳಿಸಿದರು. ಶತಕ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಸ್ಮೃತಿ ಮಂದನಾ ‘ವುಮನ್ ಆಫ್ ದಿ ಮ್ಯಾಚ್’ ಪ್ರಶಸ್ತಿಗೆ ಭಾಜನರಾದರು.

Comments are closed.