ಪತ್ರಕರ್ತರಿಗೆ ಶಿಕ್ಷೆ ಪ್ರಕರಣ: ನಾಳೆಗೆ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಪತ್ರಕರ್ತರಿಬ್ಬರಿಗೆ ಸ್ಪೀಕರ್‌ ಕೋಳಿವಾಡ ಶಿಕ್ಷೆ ವಿಧಿಸಿದ್ದ ಪ್ರಕಣದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಾಳೆಗೆ ಮುಂದೂಡಿದೆ. ಪ್ರಕರಣದ ಕುರಿತು ಸಂಜೆ 4.30ಕ್ಕೆ ಸರ್ಕಾರ ತನ್ನ ನಿಲುವು ತಿಳಿಸುವಂತೆ ಇಂದು ಬೆಳಗ್ಗೆ ಹೈಕೋರ್ಟ್‌ ಎಎಜಿಗೆ ಆದೇಶಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಪ್ರವಾಸದಲ್ಲಿದ್ದು, ಸ್ಪೀಕರ್‌ ಹಾವೇರಿ ಪ್ರವಾಸದಲ್ಲಿರುವುದರಿಂದ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ. ಸರ್ಕಾರದ ನಿರ್ಧಾರ ಏನೆಂಬುದನ್ನು  ಇಂದು ರಾತ್ರಿ ಚರ್ಚಿಸಿ, ಕೋರ್ಟ್‌ಗೆ ತಿಳಿಸಲಾಗುವುದು ಎಂದು ವಕೀಲರಾದ ಪೊನ್ನಣ್ಣ ವಿವರಣೆ ನೀಡಿದ್ದಾರೆ. ಸರ್ಕಾರ ಹಾಗೂ ಪತ್ರಕರ್ತರು ಒಪ್ಪಂದ ಮಾಡಿಕೊಳ್ಳದಿದ್ದರೆ ನಾಳೆ ತೀರ್ಪು ಪ್ರಕಟಿಸುವುದಾಗಿ ಹೈಕೋರ್ಟ್‌ ತಿಳಿಸಿದೆ.

 

 

 

 

Comments are closed.

Social Media Auto Publish Powered By : XYZScripts.com