ಅಪರಾಧ, ದೌರ್ಜನ್ಯ ನಡೆಯುತ್ತಿದ್ದರೂ ಜನರು ಸುಮ್ಮನಿರುತ್ತಾರೆ, ತನಿಖೆಗೆ ಸಹಕರಿಸಲ್ಲ

ನವದೆಹಲಿ: ಕಣ್ಣೆದುರಿಗೆ ಅಪರಾಧ, ದೌರ್ಜನ್ಯ ನಡೆದರೂ ಜನರು ಸಾಕ್ಷಿ ಹೇಳಿ, ಪೊಲೀಸರ ತನಿಖೆಗೆ ಸಹಕರಿಸುವುದಿಲ್ಲ. ಅಲ್ಲದೇ ಅಪರಾಧ ನಡೆಯುವ ಸ್ಥಳಗಳಲ್ಲಿ ನಿಂತು ನಾಟಕ ನೋಡುತ್ತಾರೆ ಎಂದು ದೆಹಲಿ ನ್ಯಾಯಾಲಯ ಹೇಳಿದೆ.

2015ರಲ್ಲಿ ದೆಹಲಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ವೇಳೆ ಅಪರಾಧಿ ಬಾಲಕಿಗೆ ಚಾಕೋಲೇಟ್‍ ಕೊಡಿಸಲು ದಿನವೂ ಬರುತ್ತಿದ್ದ. ಹೀಗೆ ದಿನವೂ ಬರುತ್ತಿದ್ದವನನ್ನು ಅಕ್ಕಪಕ್ಕದ ಮನೆಯವರು ನೋಡಿರುತ್ತಾರೆ. ಆದರೆ ಪೊಲೀಸರು ತನಿಖೆ ವೇಳೆ ಬಂದು ಸಾಕ್ಷಿ ಹೇಳುವುದಿಲ್ಲ. ಅಪರಾಧಿ ಬೇರೆ ಬೇರೆ ದಿನಾಂಕಗಳಂದು ಬಾಲಕಿಯನ್ನು ಭೇಟಿಯಾಗಿದ್ದಾನೆ. ಅಲ್ಲದೇ ಹಣ ತೋರಿಸಿ, ಅವಳಿಗೆ ಒಂದಿಷ್ಟು ತಿನಿಸು ಕೊಡಿಸಿ, ಕರೆದೊಯ್ದು ದೌರ್ಜನ್ಯವೆಸಗಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲಿ ಇಷ್ಟೆಲ್ಲಾ ನಡೆದಿದೆ. ಅಲ್ಲದೇ ಇದನ್ನು ಯಾರಾದರೊಬ್ಬರು ನೋಡಿರುತ್ತಾರೆ. ಆದರೆ ಯಾರೂ ಸತ್ಯ ಹೇಳುವುದಿಲ್ಲ. ಅಪರಾಧಿ ಈಗ ಬೇಲ್‍ ಮಡೆದು ಮನೆಗೆ ತೆರಳಿದ್ದಾನೆ ಎಂದು ಹೇಳಿದರು. ಅಪರಾಧಗಳು ಸುತ್ತಲೂ ನಡೆಯುತ್ತವೆ. ಸತ್ಯಾಂಶ ನೋಡಿದ ಯಾರೊಬ್ಬರೂ ಕೋರ್ಟ್ಗೆ ಬರುವುದಿಲ್ಲ. ಪೊಲೀಸರ ತನಿಖೆ ವೇಳೆ ನಿಜ ಹೇಳುವುದಿಲ್ಲ ಎಂದು ದೆಹಲಿ ಕೋರ್ಟ್‍ ಆರೋಪಿಸಿದೆ.

ಈ ಬಗ್ಗೆ ಅಡಿಷನಲ್‍ ಸೆಷನ್ಸ್‍ ನ್ಯಾಯಾಧೀಶ  ಅಶ್ವಿನಿ ಕುಮಾರ್‍ ಸರ್ಪಲ್‍ ಮಾತನಾಡಿ, ಜನರು ಅಪರಾಧ ಸ್ಥಳದಲ್ಲಿ ಸುತ್ತಲೂ ನಿಂತು ತಮಾಷೆ ನೋಡುತ್ತಾರೆ. ಪೊಲೀಸರಿಗೆ ತನಿಖೆ ಮತ್ತು ವಿಚಾರಣೆಗೆ ಸಹಕರಿಸುವುದಿಲ್ಲ. ಅಲ್ಲದೇ ಘಟನೆ ನಡೆದ ಸ್ಥಳದಲ್ಲಿ ಹಾಜರಿದ್ದ ಜನರು, ಅಕ್ಕಪಕ್ಕದ ಮನೆಯವರೂ ನಿಜ ಸಂಗತಿಯನ್ನು ತಿಳಿಸುವುದಿಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ಸೂರಜ್‍ ಎಂಬುವನು ಐದನೇ ತರಗತಿ ಓದುತ್ತಿದ್ದ ಮಗುವನ್ನು ಹಿಡಿದುಕೊಂಡು ಹೋಗಿದ್ದ. ಮಗುವಿನ ಮೇಲೆಸಗಿದ ದೌರ್ಜನ್ಯ ಕುರಿತು ತಾಯಿ ಗೀತಾ ಕಾಲೊನಿಯಲ್ಲಿ ಮಗುವಿನ ಮೇಲೆ ದೌರ್ಜನ್ಯ ಎಸಗಿದ್ದ ಬಗ್ಗೆ ದೂರು ನೀಡಿದ್ದಾರೆ. ಅಪರಾಧಕ್ಕಾಗಿ ಐದು ವರ್ಷಗಳ ಅವಧಿಯಲ್ಲಿ ಗರಿಷ್ಠ ಮೂರು ವರ್ಷ ಜೈಲುಶಿಕ್ಷೆಯನ್ನು ಮುಂದಿನ ವಾರ ನ್ಯಾಯಾಲಯ ಉಚ್ಛರಿಸಲಿದೆ ಎಂದು ಕೋರ್ಟ್ ಹೇಳಿದೆ. ಜುಲೈ 2015ರಲ್ಲಿ ಗೀತಾ ಕಾಲೊನಿ ಪೊಲೀಸ್‍ರಿಗೆ ಮಗಳ ಮೇಲೆ ನಡೆದ ದೌರ್ಜನ್ಯ ಕುರಿತು ದೂರು ದಾಖಲಿಸಿದ್ದರು.

ಕೇಸು ದಾಖಲಿಸಿದಾಗ ನಿರ್ದಿಷ್ಟ ದಿನಾಂಕ, ಸಮಯ, ಸ್ಥಳವನ್ನು ಉಲ್ಲೇಖಿಸಿಲ್ಲ. ಘಟನೆ ಬಗ್ಗೆ ಸಾಕ್ಷಿಗಳು ನಿಖರವಾಗಿಲ್ಲ. ಸಾಕ್ಷಿದಾರರು ಪೀರ್ಯಾದುದಾರರಿಗೆ ಹತ್ತಿರದವರಾಗಿದ್ದು, ಸಾಕ್ಷಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com