ಕಾರ್ ಕ್ಲೀನಿಂಗ್ ನೆಪದಲ್ಲಿ ಬೆಲೆಬಾಳುವ ವಸ್ತು ಕಳ್ಳತನ, ಫೇಸ್ಬುಕ್ ನಿಂದಾಗಿ ಸಿಕ್ಕಿ ಬಿದ್ದ ಕಳ್ಳ..!

ಬೆಂಗಳೂರಿನಲ್ಲಿ ಕುಮಾರ ಸ್ವಾಮಿ ಲೇಔಟ್ ಸುಭಾಷ್ ನಗರ ನಿವಾಸಿಯಾಗಿರುವ ನವೀನ್ ಎಂಬಾತ ಬರೋಬ್ಬರಿ ಎರಡೂವರೆ ವರ್ಷದಿಂದ ಕಾರ್ ಕ್ಲೀನ್ ಮಾಡುವ ನೆಪದಲ್ಲಿ ಕಾರಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನ ಎಗರಿಸುತ್ತಿದ್ದನಂತೆ. ಆದರೆ ಈಗ ಖತರ್ನಾಕ್ ಕಳ್ಳ ತನ್ನ ಫೇಸ್ ಬುಕ್ ನಿಂದಲೇ ಸಿಕ್ಕಿಬಿದ್ದಿದ್ದಾನೆ. ಸ್ಯಾಂಡಲ್ ವುಡ್ ನಲ್ಲಿ ಹೊಸದಾಗಿ ಸೇಟ್ಟೆರುತ್ತಿರುವ ತಂಬೂರಿ ಚಲನ ಚಿತ್ರದ ನಿರ್ಮಾಪಕ ಡಾ.ಕಿರಣ್ ತೋಟಂಬಳೆ ಕುಮಾರ ಸ್ವಾಮಿ ಲೇಔಟ್ ನಿವಾಸಿಯಾಗಿದ್ದು, ಅವರ ಕಾರನ್ನ ಪ್ರತಿ ದಿನ ನವೀನ್ ಕ್ಲೀನ್ ಮಾಡುತ್ತಿದ್ದ, ಈತನ ಮೇಲೆ ನಂಬಿಕೆಯಿಟ್ಟು ಕಾರ್ ನಲ್ಲಿ ಕ್ಯಾಶ್ ಇಡುವ ಬ್ರೀಪ್ ಕೇಸ್, ಬೆಲೆಬಾಳುವ ವಸ್ತುಗಳು ಸೇರಿದಂತೆ ಹಲವು ಐಟಮ್ ಗಳನ್ನ ಡಾ. ಕಿರಣ್ ಹಾಗೇ ಕಾರಿನಲ್ಲಿ ಇಡುತ್ತಿದ್ದರು. ಆದ್ರೂ ಈತನನ್ನು ನಂಬಿ ಡಾ.ಕಿರಣ್ ನವೀನ್ ಗೆ ಕಾರ್ ಕೀ ಕೊಡುತ್ತಿದ್ದರು.

ಆದರೆ ಕಳ್ಳ, ಕಾರಿನಲ್ಲಿರುವ ವಸ್ತುಗಳನ್ನ ಎಗರಿಸುತ್ತಿದ್ದ. ಇದೇ ತಿಂಗಳ 9 ರಂದು ಡಾ.ಕಿರಣ್ ಅವರ ಕಾರನ್ನು ಕ್ಲೀನ್ ಮಾಡಲು ಬಂದಿದ್ದವ ಅವ್ರ 20 ಸಾವಿರ ಬೆಲೆಬಾಳುವ ಸ್ಮಾರ್ಟ್ ಪೋನ್ ಮತ್ತು ಕೂಲಿಂಗ್ ಗ್ಲಾಸ್ ಆನ್ನು ಎಗರಿಸಿದ್ದಾನೆ. ಬಳಿಕ ತನ್ನ ಮಗನಿಗೆ ಕೂಲಿಂಗ್ ಗ್ಲಾಸ್ ಹಾಕಿ ಪೋಟೊ ತೆಗೆದು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾನೆ. ಇತ್ತ ಡಾ.ಕಿರಣ್ ಫೇಸ್ ಬುಕ್ ನೋಡೋ ವೇಳೇ ಅವ್ರ ಕಾರಿನಲ್ಲಿ ಕಾಣೆಯಾದ ಕೂಲಿಂಗ್ ಗ್ಲಾಸ್ ನವೀನ್ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿದೆ, ನನ್ನ ಕೂಲಿಂಗ್ ಗ್ಲಾಸ್ ಹೇಗೆ ಬಂತೆಂದು ಅನುಮಾನ ಶುರುವಾಗಿದೆ. ನಂತರ ಅವರ ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಕಾರ್ ಕ್ಲೀನ್ ಮಾಡ್ತಾ ಮಾಡ್ತಾ ಕಾರೊಳಗಿನ ಮೊಬೈಲ್ ಹಾಗೂ ಕೂಲಿಂಗ್ ಗ್ಲಾಸ್ ಅನ್ನ ನವೀನ್ ತೆಗೆದುಕೊಂಡಿದ್ದು ಪತ್ತೆಯಾಗಿದೆ. ಈ ಖತರ್ನಾಕ್ ಕಳ್ಳನ ನಿಜಬಣ್ಣ ಸಿಸಿಟಿವಿ ಯಲ್ಲಿ ಬಯಲಾಗಿದ್ದು ಹೀಗೆ.. ಡಾ.ಕಿರಣ್ ತೋಟಂಬಳೆ ಅವರು ಹೇಳುವಂತೆ ಏರಿಯಾದಲ್ಲಿ ಎಲ್ಲರಿಗೂ ಚಿರಪರಿಚಿತನಾಗಿದ್ದುಕೊಂಡೆ ಸಭ್ಯಸ್ತನಂತೆ ಫೋಸ್ ನೀಡುತ್ತಿದ್ದವ ಕಳೆದ ಎರಡು ವರೆ ವರ್ಷಗಳಿಂದ ಕಳ್ಳತನ ಮಾಡ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಕೆಲವು ತಿಂಗಳ ಹಿಂದೆ ಬೆಲೆಬಾಳುವ ಎರಡು ಸೈಕಲ್ ಗಳು ಕಾಣೆಯಾಗಿದ್ದು ಇದರ ಹಿಂದೆಯೂ ಇವನ ಕೈವಾಡವಿದೆ ಅನ್ನುವ ಅನುಮಾನ ವ್ಯಕ್ತಪಡಿಸ್ತಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನವೀನ್ ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

Comments are closed.

Social Media Auto Publish Powered By : XYZScripts.com