ಬಳ್ಳಾರಿ : ನಾಳೆ ಮದುವೆಯಾಗಬೇಕಿದ್ದ ಯೋಧನ ಸಾವು, ಶೋಕದಲ್ಲಿ ಮುಳುಗಿದ ಗ್ರಾಮ

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬಸರಳ್ಳಿ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದ ಯೋಧ ಸಾವನ್ನಪ್ಪಿದ್ದಾನೆ. ನಾಳೆ ಆತನ ವಿವಾಹ ಇತ್ತು. ಸೆಂಟ್ರಲ್ ಆರ್ಮಡ್ ವಿಭಾಗದ ಯೋಧ ಹನುಮಂತಪ್ಪ ಕೊರ್ಲಗಟ್ಟಿ (೩೦)  ಮದುವೆಗೆಂದು ರಜೆ ಮೇಲೆ ಊರಿಗೆ ಆಗಮಿಸಿದ್ದ. ಜುಲೈ ಒಂದರಂದು ಈತನ ಮದುವೆ ನಿಗದಿಯಾಗಿತ್ತು .

ಜ್ವರದಿಂದ ಬಳಲುತ್ತಿದ್ದ ಯೋಧನನ್ನು ನಿನ್ನೆ ಚಿಕಿತ್ಸೆ ಗಾಗಿ ಹುಬ್ಬಳ್ಳಿ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾನೆ. ಮದುವೆ ಕಾರ್ಡ್ ಹಂಚುವ ಭರಾಟೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ. ಬಸರಳ್ಳಿ ಗ್ರಾಮದಲ್ಲಿ ಈಗ ಶೋಕ ಮಡುಗಟ್ಟಿದೆ.

Comments are closed.

Social Media Auto Publish Powered By : XYZScripts.com