ಹುಬ್ಬಳ್ಳಿ : ಸವರ್ಣೀಯರಿಂದ ದಲಿತರಿಗೆ ಬಹಿಷ್ಕಾರ, ಇನ್ನೂ ಜೀವಂತವಾಗಿದೆ ಅಸ್ಪೃಶ್ಯತೆ..!

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಮೇಲ್ಜಾತಿ ಮತ್ತು ದಲಿತರ ಮಧ್ಯೆ ಜಗಳ ನಡೆದಿದ್ದು, ದಲಿತರನ್ನು ಊರಿನಿಂದ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಹುಬ್ಬಳ್ಳಿಯ ದೇವರಕೊಂಡ ಗ್ರಾಮದಲ್ಲಿ ನಡೆದಿದೆ. ಸವರ್ಣೀಯರ ಜಮೀನಿನಲ್ಲಿ ದಲಿತ ನಿವಾಸಿ ದುರುಗಪ್ಪ ಹರಿಜನ ಅವರ ಜಾನುವಾರುಗಳು ಮೇವು ತಿಂದಿದ್ದವು. ಅದಕ್ಕಾಗಿ ಜಾನುವಾರುಗಳಿಗೆ ಮೇಲ್ಜಾತಿಯವರು ಹೊಡೆದಿದ್ದರು. ಅದನ್ನು ಪ್ರಶ್ನೆ ಮಾಡಿದ್ದಕ್ಕಾಗಿ ದಲಿತರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಜೊತೆಗೆ ದೇವಸ್ಥಾನ, ದಿನಸಿ ಅಂಗಡಿಗೂ ಪ್ರವೇಶ ನಿರಾಕರಿಸಿದ್ದು, ಅಂಗಡಿಯವರು ದಿನಸಿ ಸಾಮಾನು ನೀಡಿದರೆ 500 ರೂ ಹಾಗೂ ದಲಿತರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದರೆ 1,000ರೂ ದಂಡ ವಿಧಿಸಲಾಗಿದೆ. ದಲಿತರಿಗೆ ಕೂಲಿ ಕೆಲಸಕ್ಕೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ದಲಿತ ಕುಟುಂಬದವರು ಸವರ್ಣೀಯರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

 

 

 

 

 

 

 

Comments are closed.