ನಮ್ಮ ಹೋರಾಟ ಶ್ರೀಗಳ ವಿರುದ್ಧವಲ್ಲ, ಇಫ್ತಾರ್ ಕೂಟದ ವಿರುದ್ಧ: ಮುತಾಲಿಕ್‌

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಯಾವುದೇ ಇಫ್ತಾರ್‌ ಕೂಟಕ್ಕೆ ಹೋಗಿಲ್ಲ. ಅಮೆರಿಕದ ಅಧ್ಯಕ್ಷ ಟ್ರಂಪ್ ಸಹ ಇಫ್ತಾರ್‌ ಕೂಟವನ್ನು ಪಾರ್ಲಿಮೆಂಟ್ ನಲ್ಲಿ ರದ್ದು ಮಾಡಿದ್ದಾರೆ. ಶ್ರೀ ಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ಮಾಡುವ ಅವಶ್ಯಕತೆ ಏನಿತ್ತು  ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರಶ್ನೆ ಮಾಡಿದ್ದಾರೆ. ಪೇಜಾವರ ಶ್ರೀಗಳ ಬಗ್ಗೆ ನಮಗೆ ಗೌರವವಿದೆ. ನಮ್ಮ ನೋವನ್ನ ರಾಜ್ಯದ ಜನತೆಗೆ ತಿಳಿಸುವ ಕೆಲಸ ಮಾಡುತ್ತೇವೆ. ಸ್ವಾಮಿಜಿ ಕ್ಷಮೆ ಕೇಳಲಿ ಎಂದು ಅಪೇಕ್ಷೆ ಪಟ್ಟಿಲ್ಲ. ಎಚ್ಚರಿಕೆ ಕೊಡುವ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ನಮ್ಮ ಹೋರಾಟ ಪೇಜಾವರ ಶ್ರೀಗಳ ವಿರುದ್ಧವಲ್ಲ. ಇಫ್ತಾರ್‌ ಕೂಟ ಹಾಗೂ ನಮಾಜ್ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ. ಶ್ರೀಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಮಠದಲ್ಲಿ ಈ ರೀತಿ ನಡೆದದ್ದು ನಮಗೆ ನೋವುಂಟು ಮಾಡಿದೆ. ಮುಸ್ಲೀಮರು ಹಿಂದೂ ಹಬ್ಬಗಳನ್ನು ಮಸೀದಿಯಲ್ಲಿ ಆಚರಣೆ ಮಾಡುವುದಿಲ್ಲ. ಸೌಹಾರ್ದತೆ ಎಂಬುದು ಎರಡೂ ಕಡೆಯಿಂದಲೂ ಇರಬೇಕು ಎಂದಿದ್ದಾರೆ.

 

Comments are closed.

Social Media Auto Publish Powered By : XYZScripts.com