ನಮ್ಮಿಂದ ತಪ್ಪಾಗಿದೆ ನಾವು ಗೋ ಮಾಂಸ ಸೇವಿಸಬಾರದಿತ್ತು: ಮಾಜಿ ಮೇಯರ್‌ ಪುರುಷೋತ್ತಮ್‌

ಮೈಸೂರು: ಮೈಸೂರಿನ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವನೆ ವಿಚಾರ ಕುರಿತಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಮೇಯರ್‌ ಪುರುಷೋತ್ತಮ್‌ ಕ್ಷಮೆ ಯಾಚಿಸಿದ್ದಾರೆ. ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುರುಷೋತ್ತಮ್‌, ನಮ್ಮಿಂದ ತಪ್ಪಾಗಿದೆ, ಅದನ್ನು ತಿದ್ದಿಕೊಳ್ಳುತ್ತೇವೆ. ಯಾವುದೇ ಧರ್ಮ, ಜಾತಿ, ವ್ಯಕ್ತಿಗೆ ನೋವು ಕೊಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಕಾರ್ಯಕ್ರವನ್ನು ಗೋಮಾಂಸ ತಿನ್ನುವ ಮೂಲಕ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು.ಆ ಕಾರ್ಯಕ್ರಮದಲ್ಲಿ ಸಸ್ಯಹಾರ ಹಾಗೂ ಮಾಂಸಹಾರದ ಇತರೆ ಆಹಾರವೂ ಇತ್ತು ಎಂದಿದ್ದಾರೆ. ಜೊತೆಗೆ ಕಾರ್ಯಕ್ರಮದ ಉದ್ದೇಶ ಆಹಾರ ಪದ್ದತಿಯ ಕುರಿತಾಗಿದ್ದರಿಂದ ಗೋಮಾಂಸ ಸೇವನೆ ಮೂಲಕ ಉದ್ಘಾಟನೆಯಾಗಿದೆ. ಅದು ಘೋರ ಅಪರಾಧವಲ್ಲ. ಆದರೆ ಹಿಂದೂಪರ ಸಂಘಟನೆಗಳು ಸರ್ಕಾರಿ ಸಭಾಂಗಣದಲ್ಲಿ ಗಂಜಲ ಪ್ರೋಕ್ಷಣೆ ಮಾಡಿ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೆ ನಾವು ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದೆವು. ಆದರೆ ಹಿಂದೂಪರ ಸಂಘಟನೆಗಳು ಗಂಜಲ ಪ್ರೋಕ್ಷಣೆ ಮಾಡಲು ಯಾರ ಅನುಮತಿ ಪಡೆದಿದ್ದರು. ಇದು ನಿಜಕ್ಕೂ ಮೌಢ್ಯದ ಸಂಗತಿಯಾಗಿದೆ. ಈ ವಿಚಾರವನ್ನು ಇಲ್ಲಿಗೇ ನಿಲ್ಲಿಸದಿದ್ದರೆ ನಾವು ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Comments are closed.

Social Media Auto Publish Powered By : XYZScripts.com