ಬೆಂಗಳೂರು : ಒಂಟಿ ಯುವತಿಯರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನ..!

ಬೆಂಗಳೂರು : ಒಂಟಿಯಾಗಿ ಓಡಾಡುವ ಯುವತಿಯರ ಸುಲಿಗೆ ಮಾಡುತ್ತಿದ್ದವರನ್ನು ಸೆರೆಹಿಡಿಯಲಾಗಿದೆ. ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ಹೋಗುವ ಯುವತಿಯರು, ಮಹಿಳೆಯರೇ ಇವರ ಟಾರ್ಗೆಟ್  ಆಗಿರುತ್ತಿದ್ದರು. ರಾತ್ರಿ ವೇಳೆ ದಾರಿಯಲ್ಲಿ ಅಡ್ಡ ಗಟ್ಟಿ ಗ್ಯಾಂಗ್ ನವರು ಮಾರಾಕಾಸ್ತ್ರಗಳನ್ನ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಇದೇ ೨೬ರ ರಾತ್ರಿ ರಾಬರಿ ಮಾಡಲು ಹೊಂಚು ಹಾಕುತ್ತಿದ್ದಾಗ ಖಾಕಿ ಬಲೆಗೆ ಬಿದ್ದಿದ್ದಾರೆ. ರಾಜಗೋಪಾಲನಗರ ಪೊಲೀಸರಿಂದ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಶಶಿಕುಮಾರ್ , ಶಂಕರ್ ಲಿಂಗ, ಬಸವರಾಜ್ ಸೇರಿ 7 ಜನರ ಸೆರೆ‌ಹಿಡಿಯಲಾಗಿದೆ. ಪೀಣ್ಯ 2 ನೇ ಹಂತದ ರಾಮಯ್ಯ ಲೇಔಟ್ ಬಳಿ ದುಷ್ಕರ್ಮಿಗಳು ರಾಬರಿಗೆ ಹೊಂಚು ಹಾಕುತ್ತಿದ್ದರು. ಎರಡು ಟೀಂಗಳಲ್ಲಿ ಪ್ರತ್ಯೇಕ ಕಡೆಗಳಲ್ಲಿ ರಾಬರಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೋಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮಾರಕಾಸ್ತ್ರಗಳು ಕಾರದ ಪುಡಿ ವಶಪಡಿಸಿಕೊಂಡಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.