ಗಡಿಪಾರು ಮಾಡಲು ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ: ಮುತಾಲಿಕ್‌

ಧಾರವಾಡ: ಉಡುಪಿಯ ಪೇಜಾವರ ಶ್ರೀಗಳಿಂದ ಮಠದ ಪಾವಿತ್ರ್ಯತೆ ಹಾಳಾಗಿದೆ. ಇದರ ವಿರುದ್ಧ ಜುಲೈ 2ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಪೇಜಾವರ ಶ್ರೀಗಳನ್ನು ಬೆಂಬಲಿಸುವ ಕಾಂಗ್ರೆಸ್ಸಿಗರು ರಾಮ ಮಂದಿರ ವಿಷಯದಲ್ಲಿ ಇದೇ ನಿಲುವು ತಾಳುವರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದಿದ್ದಾರೆ. ಶ್ರೀ ಕೃಷ್ಣ ಮಠದಲ್ಲಿ ಇಫ್ತಿಯಾರ್‌ ಕೂಟ ನಡೆದಂತೆ ಮುಸ್ಲಿಮರು ಮಸೀದಿಗಳಲ್ಲಿ ಗಣೇಶ್ ಚತುರ್ಥಿ ಹಾಗೂ ಯುಗಾದಿ ಆಚರಣೆ ಮಾಡಲಿ. ಆಗ ಸೌಹಾರ್ದತೆ ಬೆಳೆಯುತ್ತದೆ. ಕಾಂಗ್ರೆಸ್ ನವರು ನನ್ನನ್ನು ಗಡಿ ಪಾರು ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಿ ಪಾರು ಮಾಡಲು ನಾನು ಯಾರನ್ನು ಅತ್ಯಾಚಾರ ಮಾಡಿಲ್ಲ. ಸ್ವಾಮೀಜಿಯನ್ನು ಬೆಂಬಲಿಸಿದಂತೆ ರಾಮ ಮಂದಿರ ಕಟ್ಟಲು ಬೆಂಬಲಿಸಲಿ ಎಂದಿದ್ದು, ಯಾರೂ ನನಗೆ ಬೆಂಬಲ ನೀಡದಿದ್ದರೂ ನಾನೊಬ್ಬನೇ ಶ್ರೀಗಳ ವಿರುದ್ಧ ಹೋರಾಡುತ್ತೇನೆ ಎಂದಿದ್ದಾರೆ.

Comments are closed.