ಕೇಂದ್ರದ ವಿರುದ್ಧ ಘೋಷಣೆ ಕೂಗಿದ್ದು ತಪ್ಪು: ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

ಮೈಸೂರು: ವಿಚಾರವಾದಿ ಭಗವಾನ್‌ ಹಾಗೂ ಪ್ರೊ.ಮಹೇಶ್ ಚಂದ್ರ ಗುರು ಸರ್ಕಾರಿ ಕಟ್ಟಡದಲ್ಲಿ ಗೋಮಾಂಸ ಸೇವಿಸಿದ್ದು ಸರಿಯಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಹೇಶ್ ಚಂದ್ರಗುರು ಒಬ್ಬ ಪ್ರೊಫೆಸರ್‌ ಆಗಿ ಈ ರೀತಿ ಮಾಡಿದ್ದು ತಪ್ಪು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ. ಭಗವಾನ್‌ ಹಾಗೂ ಮಹೇಶ್‌ ಚಂದ್ರಗುರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಈ ಕುರಿತು ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂಬ ಭರವಸೆ ಇರುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಗೋ ಮಾಂಸ ಸೇವನೆ ವಿಚಾರ ಸಂಬಂಧ ,ಮಾಂಸ ಸೇವನೆ ಮಾಡಿರುವ ಪ್ರಗತಿಪರ ಸಂಘಟನೆಗಳ ಪ್ರಮುಖರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರಿನ ಎಫ್‌ಟಿಎಸ್‌ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರಗತಿಪರರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

 

Social Media Auto Publish Powered By : XYZScripts.com