ಟೋಪಿ ಹಾಕಿಕೊಂಡು ಫೋಸ್‌ ಕೊಡೋ ರಾಜಕಾರಣಿಗಳಂತಲ್ಲ ಈ ಸ್ವಾಮೀಜಿ: ಡಿವಿಎಸ್‌ ಹೇಳಿಕೆ

ಬೆಂಗಳೂರು: ಉಡುಪಿಯಲ್ಲಿ  ಇಫ್ತಾರ್ ಕೂಟ ಆಚರಣೆ ಮಾಡಿದ್ದು ತಪ್ಪಲ್ಲ. ಸ್ವಾಮೀಜಿಗಳು ಭಾವನಾತ್ಮಕವಾಗಿ ಆಚರಣೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ. ಒಂದು ವೇಳೆ ನಮಾಜ್‌ ಬಿಟ್ಟು ಬೇರೇನೆ ಮಾಡಿದ್ದರೂ ತಪ್ಪಾಗುತ್ತಿತ್ತು. ರಂಜಾನ್‌ಗಾಗಿ ರಾಜಕಾರಣಿಗಳು ಟೋಪಿ ಹಾಕಿಕೊಂಡು ಫೋಸ್‌ ಕೊಡುತ್ತಾರೆ. ಆದರೆ ಸ್ವಾಮೀಜಿಗಳು ಹಾಗೆ ಮಾಡಿಲ್ಲ.

ಸರ್ವ ಧರ್ಮ ಸಮನ್ವಯ ಭಾವನೆಯಲ್ಲಿ ಅವರು ಆಚರಣೆ ಮಾಡಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಮೈಸೂರಿನ ಸರ್ಕಾರಿ ಕಚೇರಿಯಲ್ಲಿ ಗೋಮಾಂಸ ಸೇವನೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಸದಾನಂದಗೌಡ, ಕೆಲ ಬುದ್ದಿ ಜೀವಿಗಳಿಗೆ ತಲೆಯಲ್ಲಿ ಬುದ್ದಿ ಇರುವುದಿಲ್ಲ. ಅವರ ಚೀಲದಲ್ಲಿರುತ್ತದೆ. ಅದನ್ನು ಇಂತದ್ದಕ್ಕೆ ಖರ್ಚು ಮಾಡುತ್ತಾರೆ ಎಂದಿದ್ದಾರೆ. ಯಾರ ಆಹಾರ ಪದ್ದತಿ ಕುರಿತೂ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಇದು ಒಳ್ಳೆಯ ಸಂಪ್ರದಾಯವಲ್ಲ. ರಾಜ್ಯ ಸರ್ಕಾರವೇ ಇಂತವುಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದಿದ್ದು,  ಕೂಡಲೇ ಗೋಮಾಂಸ ಭಕ್ಷಣೆ ಮಾಡಿದವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಸಿಎಂಗೆ ಆಗ್ರಹಿಸಿದ್ದಾರೆ.

 

Comments are closed.