ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ: ಉಡುಪಿ ಮಠದ ಪೇಜಾವರ ಶ್ರೀ ಹೇಳಿಕೆ

ಉಡುಪಿ:  ಗೋಮಾಂಸವನ್ನು ಕೇವಲ ಮುಸ್ಲಿಮರು ಮಾತ್ರವಲ್ಲ, ಹಿಂದುಗಳಲ್ಲೂ ಹಲವರು ಭಕ್ಷಿಸುತ್ತಾರೆ. ಹಾಗೆಂದು ಅವರನ್ನು ಧರ್ಮ ದಿಂದಲೇ ಹೊರಹಾಕಲು ಸಾಧ್ಯವಿಲ್ಲ. ಹಿಂದೂಗಳಲ್ಲಿ ಎಷ್ಟೋ ಮಂದಿ ಬಹಿರಂಗವಾಗಿ ತಾವು ಗೋಮಾಂಸ ತಿನ್ನುತ್ತೇವೆ ಎನ್ನುತ್ತಾರೆ. ಅವರನ್ನೆಲ್ಲಾ ಬಹಿಷ್ಕರಿಸಲು ಸಾಧ್ಯವಿಲ್ಲ. ಅವರಿಗೆ ಹೇಳಿ, ಮನವೊಲಿಸಿ ಒಪ್ಪಿಸಬಹುದು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಮುಸ್ಲಿಮರಿಗೂ ಗೋಮಾಂಸ ಭಕ್ಷಣೆ ಬಿಡಿ ಎಂದು ಹೇಳೋಣ. ಇದಕ್ಕಾಗಿ ಅನವಶ್ಯಕವಾಗಿ ಜನರ ಮನಸ್ಸಿನಲ್ಲಿ ಇಲ್ಲದ ಆಕ್ರೋಶ ಎಬ್ಬಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಮುತಾಲಿಕ್‌ಗೆ ಹೇಳಿರುವುದಾಗಿ ಶ್ರೀಗಳು ನುಡಿದಿದ್ದಾರೆ. ನಾನು ಧರ್ಮಕ್ಕೆ ಅಪಚಾರವಾಗುವ ಕೆಲಸವನ್ನು ಎಂದೂ ಮಾಡಿಲ್ಲ. ನಮ್ಮ ಪರಮಗುರುಗಳು ಹಾಜಿ ಅಬ್ದುಲ್ಲಾರ ಮನೆಗೆ 1904ರಲ್ಲಿ ಪರ್ಯಾಯದ ಪೂರ್ವಭಾವಿಯಾಗಿ ಹೋಗಿ ಕಾಣಿಕೆ ಸ್ವೀಕಾರ ಮಾಡಿದ್ದಾರೆ. ಅಲ್ಲದೇ 800 ವರ್ಷಗಳ ಹಿಂದೆ ಮಧ್ವಾಚಾರ್ಯರು ಆಗಿನ ಕಾಲದ ಮುಸ್ಲಿಂ ಸುಲ್ತಾನರ ಜೊತೆ ಸಂವಾದ ನಡೆಸಿ ಅವರಿಂದ ಗೌರವ, ಸನ್ಮಾನ ಸ್ವೀಕರಿಸಿದ್ದಾರೆ. ಅದೇ ರೀತಿ ರಾಘವೇಂದ್ರ ಸ್ವಾಮೀಜಿಗಳೂ ಮುಸ್ಲಿಂ ದೊರೆಗಳಿಂದ ಸನ್ಮಾನ ಸ್ವೀಕರಿಸಿದ್ದಾರೆ. ಮಠದ ಜಾಗವನ್ನು ಅವರಿಗೆ ನೀಡಿದ್ದು ಸಹ ಮುಸ್ಲಿಂ ಸುಲ್ತಾನರೇ ಎಂದು ಪೇಜಾವರ ಶ್ರೀ ವಿವರಿಸಿದರು.ಈಗಿನ ಪ್ರಜಾಪ್ರಭುತ್ವದಲ್ಲಿ ಇದೊಂದು ದೊಡ್ಡ ವಿಷಯವೇ ಅಲ್ಲ. ಇದು ಸಹಜವಾದ ಕಾರ್ಯಕ್ರಮ. ನಮ್ಮನ್ನು ಅನೇಕ ಕಡೆ ಮಸೀದಿಗೆ ಕರೆಸಿದ್ದಾರೆ. ಮಸೀದಿಯಲ್ಲಿ ಉಪನ್ಯಾಸ ಮಾಡಿಸಿದ್ದಾರೆ. ಮಸೀದಿಯನ್ನು ಉದ್ಘಾಟನೆ ಮಾಡಿಸಿದ್ದಾರೆ. ಸತ್ಕರಿಸಿದ್ದಾರೆ. ಇಂತಹ ಅನೇಕ ಸನ್ಮಾನಗಳು ಉಡುಪಿಯಲ್ಲಿ ನಡೆದಿದೆ. ಭಟ್ಕಳದಲ್ಲಿ ದೊಡ್ಡ ಮಟ್ಟದಲ್ಲಿ ಸತ್ಕರಿಸಿದ್ದಾರೆ. ಕಾಸರಗೋಡು, ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ನಮ್ಮನ್ನು ಸನ್ಮಾನಿಸಿದ್ದಾರೆ ಎಂದು ಸ್ವಾಮೀಜಿ ನುಡಿದಿದ್ದಾರೆ.

3 thoughts on “ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ: ಉಡುಪಿ ಮಠದ ಪೇಜಾವರ ಶ್ರೀ ಹೇಳಿಕೆ

 • October 21, 2017 at 3:07 AM
  Permalink

  Somebody essentially help to make significantly articles
  I’d state. This is the first time I frequented
  your web page and up to now? I surprised with the research you made
  to make this actual put up amazing. Great process!

 • October 21, 2017 at 3:40 AM
  Permalink

  Howdy would you mind letting me know which webhost you’re utilizing?
  I’ve loaded your blog in 3 different internet browsers and
  I must say this blog loads a lot quicker then most.
  Can you suggest a good hosting provider at a fair price? Thanks, I appreciate it!

Comments are closed.