ವೀಕೆಂಡ್ ವಿಥ್ ರಮೇಶ್ 3: ಕೊನೆಯ ಅತಿಥಿ ಯಾರು ಗೊತ್ತಾ…?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು ವೀಕೆಂಡ್ ವಿಥ್ ರಮೇಶ್. ಕಳೆದೆರಡು ಸೀಸನ್ ಗಳಲ್ಲಿ ಜನಮನ್ನಣೆ ಗಳಿಸಿದ್ದಕ್ಕಿಂತ ಈ ಬಾರಿ ಈ ಕಾರ್ಯಕ್ರಮಕ್ಕೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. ಮೂರನೇ ಸೀಸನ್ ಸಾಧಕರ ಸೀಟನ್ನ ಅಲಂಕರಿಸಿದ ಸಾಧಕರ ಪಟ್ಟಿಯಲ್ಲಿ ಕೊನೆಯ ಅತಿಥಿ ಈಗ ರಿವೀಲ್ ಆಗಿದೆ.

 

 

ವೀಕೆಂಡ್ ವಿಥ್ ರಮೇಶ್ ಮೂರನೇ ಸೀಸನ್ ಮುಗಿಯುವ ಹಂತದಲ್ಲಿದೆ. ಕಳೆದೆರಡು ಎಪಿಸೋಡ್ ಗಳಲ್ಲಿ ರಾಜಕಾರಣಿಗಳ ಎಂಟ್ರಿಯಾಗಿತ್ತು. ಮಾಜಿ ಪ್ರಧಾನಮಂತ್ರಿ  ಹೆಚ್ ಡಿ ದೇವೇಗೌಡ ಹಾಗು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಧಕರ ಸೀಟನ್ನ ಅಲಂಕರಿಸಿ ಅಚ್ಚರಿ ಮೂಡಿಸಿದ್ದರು. ಈಗ ೀ ಸೀಸನ್ ನ ಕೊನೆಯ ಅತಿಥಿಯನ್ನ ಈ ವಾರ ನಿಮ್ಮ ಮುಂದೆ ರಿವೀಲ್ ಮಾಡಲಿದೆ.

ಅಂದ್ಹಾಗೆ ವೀಕೆಂಡ್ ವಿಥ್ ರಮೇಶ್ ಸೀಸನ್ 3ರ ಕೊನೆಯ ಅತಿಥಿಯಾಗಿ ಸಾಧಕರ ಸೀಟಿನಲ್ಲಿ ಕೂರುತ್ತಿರೋದು ಗೋಲ್ಡನ್ ಸ್ಟಾರ್ ಗಣೇಶ್. ಕಳೆದ ಮೂರು ಸೀಸನ್ ಗಳಿಂದ್ಲೂ ಇವರನ್ನ ಕಾರ್ಯಕ್ರಮಕ್ಕೆ ಕರೆತರೋ ಪ್ರಯತ್ನ ಸಾಗಿತ್ತು. ಆದು ಈಗ ನೆರವೇರಿದೆ. ಈ ವಾರವೇ ಪ್ರಸಾರವಾಗೋ ಗ್ರ್ಯಾಂಡ್ ಫಿನಾಲೆಯಲ್ಲಿ ಗಣೇಶ್ ಅವ್ರ ಬದುಕಿನ ಪ್ರಮುಖ ಪುಟಗಳು ತೆರೆದುಕೊಳ್ಳಲಿವೆ ಎಂದು ಜೀ ತಂಡ ಹೇಳಿಕೊಂಡಿದೆ. ಹೀಗಾಗಿ ಈ ಬಾರಿಯ ಕೊನೆಯ ಎಪಿಸೋಡ್ ಪ್ರೇಕ್ಷಕರನ್ನ ರಂಜಿಸೋದು ಗ್ಯಾರಂಟಿ

Comments are closed.

Social Media Auto Publish Powered By : XYZScripts.com