ಸಿದ್ದರಾಮಯ್ಯನವರಿಗೆ ದಲಿತರ ಬಗ್ಗೆ ಮಾತನಾಡುವ ಹಕ್ಕಿಲ್ಲ: ಬಿ.ಎಸ್‌ ಯಡಿಯೂರಪ್ಪ

ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.  ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ದಲಿತ ಮೊಹಲ್ಲಾಗಳಿಗೆ ಸಿಎಂ ಭೇಟಿ‌ ನೀಡಿದ್ದಾರೆ ಎಂದು ಪ್ರಶ್ನಿಸಿರುವ ಯಡಿಯೂರಪ್ಪ, ದಲಿತರ ಮನೆಗೆ ಕೇವಲ ಊಟ ಮಾಡಲು ಹೋಗುತ್ತಿಲ್ಲ , ಅವರ ಸಮಸ್ಯೆ ಆಲಿಸಿ ನಮ್ಮ ಸರ್ಕಾರ ಬಂದಾಗ ಅದನ್ನು ಬಗೆಹರಿಸುತ್ತೇವೆ ಎಂದಿದ್ದಾರೆ. ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರ ರಾಜ್ ಘಾಟ್ ನಲ್ಲಿ ನಡೆಯದಂತೆ ತಡೆದದ್ದು, ಜಗಜೀವನ್ ರಾಂ ಅವರಿಗೆ ಪ್ರಧಾನ ಮಂತ್ರಿ ಸ್ಥಾನ ತಪ್ಪಲು ಕಾಂಗ್ರೆಸ್ ಕಾರಣ. ಇಂದು ಕಾಂಗ್ರೆಸ್, ಸಂಸತ್ ನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾ‌ನ ಪಡೆಯಲು ಬೇಕಾದ ಕನಿಷ್ಠ ಸಂಖ್ಯೆ ಇಲ್ಲದ ಪರಿಸ್ಥಿತಿಯಲ್ಲಿದೆ. ಬರಗಾಲದ ಪರಿಸ್ಥಿತಿಯಲ್ಲಿ ಎರಡು ವರ್ಷ ಮೊದಲೇ ರೈತರ ಸಾಲ ಮನ್ನಾ ಮಾಡಬೇಕಿತ್ತು.  ಮತ್ತೆ ಬರಗಾಲದ ಛಾಯೆ ಆವರಿಸಿದೆ, ಕೂಡಲೆ ಅಗತ್ಯ ಕ್ರಮ ಕೈಗೊಂಡು, ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗಬೇಕು ಎಂದು ಸೂಚಿಸಿದ್ದಾರೆ.

Comments are closed.

Social Media Auto Publish Powered By : XYZScripts.com