ಮತ್ತೊಂದು ದೇಶಕ್ಕೆ ಮೋದಿ ಪ್ರವಾಸ, ಸ್ವಾಗತಕ್ಕೆ ಸಜ್ಜಾಗುತ್ತಿದೆ ನೆದರ್ಲೆಂಡ್ಸ್

ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಸ್ವಾಗತಿಸಲು ನೆದರ್ಲ್ಯಾಂಡ್ಸ್ ಸಜ್ಜಾಗಿದೆ. ನಾಳೆ ಆಗಮಿಸುತ್ತಿರುವ ಮೋದಿ ಸ್ವಾಗತಕ್ಕೆ ಕಳೆದ ಒಂದು ವಾರದಿಂದಲೇ ತಯಾರಿ ನಡೆಸಲಾಗುತ್ತಿದೆ. ರಾಜತಾಂತ್ರಿಕದ ಹೊರತಾಗಿ ಮೋದಿ ಅನಿವಾಸಿ ಭಾರತೀಯರನ್ನು ಭೇಟಿ ಮಾಡುತ್ತಿರುವ ಹಿನ್ನಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿ ಸಕಲ ಸಿದ್ಧತೆ ನಡೆಸುತ್ತಿದೆ. ಒಂದು ವಾರದ ಹಿಂದೆಯೇ ಸಾರ್ವಜನಿಕರಿಗೆ ನೊಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು.ನೊಂದಾಯಿಸಿಕೊಳ್ಳಲು ಅನಿವಾಸಿ ಭಾರತೀಯರು ಹೆಚ್ಚಿನ ಉತ್ಸುಕತೆ ತೋರಿದ್ದರಿಂದ ಮೊದಲು ಕೇವಲ 2 ದಿನಗಳ ಕಾಲ ಮಾತ್ರ ಇದ್ದ ಅವಕಾಶವನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು.

ನೊಂದಾವಣೆ ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ನಡೆಸಿದ್ದು, ಪ್ರತಿಯೊಬ್ಬರಿಗೂ ಯುನಿಕ್ ಕೋಡ್ ಹಾಗೂ ಪ್ರತ್ಯೇಕ ಆಹ್ವಾನ ನೀಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಆಹ್ವಾನ ಪತ್ರಿಕೆಯೊಂದಿಗೆ ಗುರುತಿನ ಚೀಟಿಯನ್ನು ತರಲು ಸೂಚಿಸಲಾಗಿದೆ. ದ ಹೇಗ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಮೋದಿ ಆಹ್ವಾನಕ್ಕೆ ನೆದರ್ಲ್ಯಾಂಡ್ಸ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅತ್ಯಂತ ಕಾತರರಾಗಿದ್ದಾರೆ. ಸದಾ  ಸೋಷಿಯಲ್ ಮೀಡಿಯಾಗಳಲ್ಲಿ ನಿಕಟ ಸಂಪರ್ಕ ಹೊಂದಿರುವ ಭಾರತೀಯರು ಮೋದಿಯದ್ದೇ ಚರ್ಚೆ ನಡೆಸುತ್ತಿದ್ದಾರೆ. ಎಲ್ಲ ಗ್ರೂಪ್ ಗಳಲ್ಲೂ ತುಂಬು ಹೃದಯದ ಸ್ವಾಗತ ಕೋರಿ ಮೋದಿಗೆ ಸಂದೇಶ ರವಾನಿಸಲಾಗುತ್ತಿದೆ. ವಿದೇಶದಲ್ಲಿದ್ದುಕೊಂಡು ತಾಯಿನಾಡಿನ ಪ್ರಧಾನಮಂತ್ರಿಯನ್ನು ಇದೇ ಮೊದಲ ಬಾರಿಗೆ ಭೇಟಿಯಾಗುತ್ತಿರುವುದಕ್ಕೆ ಭಾರತೀಯರು ಭಾವುಕರಾಗಿದ್ದಾರೆ.  

 

 

Comments are closed.

Social Media Auto Publish Powered By : XYZScripts.com