ಭಟ್ರ ಹಾಡು ನಿಜ ಆಯ್ತಾ..? ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟುಕೊಂಡ ಚೆಲುವೆ ! …ವೈರಲ್ಲಾದ ವೀಡಿಯೊ

ಅಣ್ಣಾ ಬಾಂಡ್ ಸಿನಿಮಾದ `ತುಂಬಾ ನೋಡ್ಬೇಡಿ ಲವ್ವು ಆಗ್ತದೆ’ ಹಾಡು ನಿಮಗೆಲ್ಲಾ ನೆನಪಿರಬಹುದು. ಆ ಹಾಡಿನಲ್ಲಿ `ಪ್ರಿಯಾಮಣಿ ಯಾಮಾರಿ ಒಮ್ಮೆ ತಿರುಗಿ ನೋಡಿದರೆ ಹೊಟ್ಟೆಯೊಳಗೆ ಚಿಟ್ಟೆನ ಬಿಟ್ಟಂಗಾಯ್ತದೆ’ ಅನ್ನೋ ಸಾಲಿದೆ. ನಿಜಕ್ಕೂ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟುಕೊಂಡ್ರೆ ಹೇಗಿರುತ್ತೆ..? ಅನ್ನೋದು ಯಾರಿಗೂ ಗೊತ್ತಿಲ್ಲ. ಬಟ್ ಅದೊಂದು ತರ ಆನಂದದಾಯಕ ಅನುಭವ ಅನ್ನೋ ಊಹೆ ಇದೆ. ಆದರೆ ನೂಯಾರ್ಕ್ ಮೂಲದ ಉಕ್ರೇನಿಯನ್ ಫೋಟೋ ಆರ್ಟಿಸ್ಟ್ ಒಬ್ಬಳು ಹೊಟ್ಟೆಯೊಳಗೆ ಚಿಟ್ಟೆ ಬಿಟ್ಕೊಂಡಿದ್ದಾಳೆ. ಅದ್ರ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ಹೀಗೆ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟುಕೊಂಡಿರೋ ಸಾಹಸ ಮಾಡಿರೋ ಫೋಟೊ ಆರ್ಟಿಸ್ಟ್ ಅನ್ಯಾ ಆ್ಯಂಟಿ. ಆದ್ರೆ ಈಕೆ ನಿಜವಾಗಿ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟುಕೊಂಡಿಲ್ಲ. ತನ್ನ ಫೋಟೊಗ್ರಫಿ ಸ್ಕಿಲ್ಸ್ ಬಳಸಿಕೊಂಡು ವಿಷ್ಯುವಲ್ ಆರ್ಟ್ ಮೂಲಕ ಅಂತಾದೊಂದು ಫೋಟೊ ರೆಡಿಮಾಡಿ ಖುಷಿಪಟ್ಟಿದ್ದಾಳೆ. ಫೋಟೊ ನೋಡಿದ್ರೆ ಮೊದಲ ನೋಟದಲ್ಲಿ ನಿಜವಾಗಿಯೂ ಆಕೆ ಹೊಟ್ಟೆಯೊಳಗೆ ಚಿಟ್ಟೆಗಳು ಹರದಾಡುತ್ತಿರುವಂತೆ ಕಾಣುತ್ತೆ. ಒಂದು ಅಸ್ಥಿ ಪಂಜರ ಮತ್ತು ಸಾಕಷ್ಟು ಲೇಯರ್‍ಗಳಿರೋ ಫೋಟೊಗಳನ್ನ ಬಳಸಿಕೊಂಡು ನಾಲ್ಕು ಗಂಟೆ ಎಡಿಟಿಂಗ್ ಮಾಡಿ ಇಂತಾದೊಂದು ಫೋಟೊ ಸಿದ್ಧಪಡಿಸಿದ್ದಾಳೆ.

ಸದ್ಯ ಅನ್ಯಾ ಆ್ಯಂಟಿಯ ಈ ಫೋಟೊ ಎಡಿಟಿಂಗ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಡೀಟೇಲ್ಡ್ ಆಗಿ ಈ ಫೋಟೊವನ್ನ ಎಡಿಟ್ ಮಾಡಿರೋದು ವಿಡಿಯೋದಲ್ಲಿ ಗೊತ್ತಾಗ್ತಿದೆ. ಹೊಟ್ಟೆಯೊಳಗೆ ಚಿಟ್ಟೆಗಳು ಹರಿದಾಡೋದು, ಉಲ್ಲಾಸಭರಿತ ಅನುಭವ ಅನ್ನೋ ಹೋಲಿಕೆ ಇದೆ. ಆದ್ರೆ ಈ ಫೋಟೋದಲ್ಲಿ ಅನ್ಯಾ ಆ್ಯಂಟಿ ಒತ್ತಡ, ನಿರಾಸೆಯನ್ನ ಪ್ರತಿಬಿಂಬಿಸೋ ಪ್ರಯತ್ನ ಮಾಡಿದ್ದಾಳೆ.

Comments are closed.

Social Media Auto Publish Powered By : XYZScripts.com