ಜೆಡಿಎಸ್ ನಷ್ಟು ಕುಟುಂಬ ರಾಜಕಾರಣ ನಾನು ಮಾಡಿಲ್ಲ : ಸಿದ್ದರಾಮಯ್ಯ

ಹಾಸನ : ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿ ‘ ಅವಧಿ ಪೂರ್ವ ಚುನಾನಣೆಯಿಲ್ಲ. ಕಾಂಗ್ರೆಸ್ ಪಕ್ಷ ತೊರೆದವರ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿಗೆ ದಲಿತರ ಬಗ್ಗೆ ಕಾಳಜಿಯಿಲ್ಲ, ಅದು ಕೇವಲ ನಾಟಕವಷ್ಠೆ. ಕೇಂದ್ರಕ್ಕೆ ರೈತರ ಬಗ್ಗೆ ಕಾಳಜಿಯಿದ್ದರೆ ಉಳಿದ ಸಾಲ ಮನ್ನಾ ಮಾಡಲಿ, ಅವಧಿಗೆ ಮುನ್ನ ವಿಧಾನಸಭೆ ಚುನಾವಣೆ ಇಲ್ಲ. ಮುಂದಿನ ಏಪ್ರಿಲ್, ಮೇ ನಲ್ಲೆ ಚುನಾವಣೆ ನಡೆಯಲಿದೆ. ಈ ವಿಷಯದಲ್ಲಿ ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ‘ ಎಂದರು.

‘ ಜೆಡಿಸ್ ನಷ್ಟು ಕುಟುಂಬ ರಾಜಕಾರಣ ನಾನು ಮಾಡಿಲ್ಲ. ಮಗ ಚುನಾವಣೆಗೆ ನಿಲ್ಲಬೇಕು ಎಂದುಕೊಂಡಿದ್ದಾನೆ, ಆದರೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.  ಎಚ್.ಡಿ.ಕೆ ಕುಟುಂಬದಲ್ಲಿ ಎಷ್ಟುಜನ ಚುನಾವಣೆಗೆ ನಿಂತಿದ್ದಾರೆ, ಎಷ್ಟು ಜನ ಕ್ಯೂನಲ್ಲಿ ಇದ್ದಾರೆ, ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ‘ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಸನದ ಹೆಲಿಪ್ಯಾಡ್ ನಲ್ಲಿ ಹೇಳಿದರು.

Comments are closed.