ಮೆಕ್ಸಿಕೊ ನಗರವೊಂದರಲ್ಲಿ ಬಂದೂಕುಧಾರಿಗಳ ಅಟ್ಟಹಾಸ: ಜನರ ದುರ್ಮರಣ

ಕೋಟ್ಜಾಕೋವಾಲ್ಕೊಸ್: ಮೆಕ್ಸಿಕೋದ ವೆರಾಕ್ರಜ್‍ನ ಕೋಟ್ಜಾಕೋವಾಲ್ಕೊಸ್‍ನಲ್ಲಿ ಬಂದೂಕುಧಾರಿಯೊಬ್ಬ ಆರು ಕುಟುಂಬದವರನ್ನು ಹತ್ಯೆಗೈದಿದ್ದಾನೆ. ಕ್ರಿಮಿನಲ್‍ ಗ್ಯಾಂಗ್‍ನೊಂದಿಗೆ ಈತ ಸಂಬಂಧ ಹೊಂದಿದವನಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೆಕ್ಸಿಕೊದ ಅತ್ಯಂತ ಹಿಂಸಾತ್ಮಕ ನಗರಗಳಲ್ಲಿ ಒಂದಾಗಿರುವ ವೆರಾಕ್ರಜ್ನನ ಒರಿಬಾಬಾ ಪಟ್ಟಣದಲ್ಲಿ ಇಬ್ಬರು ಮಹಿಳೆಯರನ್ನು ಬರ್ಬರ ಹತ್ಯೆಗೈಯುತ್ತಿರುವಂತೆ ಚಿತ್ರಿಸಲಾಗಿದೆ. ಶನಿವಾರ ಬಂದೂಕುದಾರಿಯಿಂದ ಒಬ್ಬ ಪೊಲೀಸ್‍ ಕಮಾಂಡರ್‍ ಮತ್ತು ಇಬ್ಬರು ಏಜೆಂಟರು ಕಾರ್ಡಲ್‍ ನಗರದಲ್ಲಿ ದಾಳಿಗೊಳಗಾಗಿದ್ದರು. ಸಮೀಪದ ಕೋಟ್ಜಾಕೋವಾಲ್ಕೊಸ್‍ ನಗರದಲ್ಲಿ ಇಬ್ಬರು ವಯಸ್ಕರರು ಮತ್ತು ನಾಲ್ಕು ಮಕ್ಕಳನ್ನು ರೆಸಾರ್ಟ್‍ ಒಂದರಲ್ಲಿ ಊಟ ಮಾಡುತ್ತಿರುವಾಗ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಹಿಂಸಾಚಾರ ಮತ್ತು ಶಾಂತಿ ಕದಡುವ ಕೆಲಸವನ್ನು ಬಂದೂಕುದಾರಿಗಳು ಮಾಡುತ್ತಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ರಾಜ್ಯದ ಗವರ್ನರ್‍ ಮಿಗುಲ್‍ ಏಂಜೆಲ್‍ ಯುನೆಸ್‍ ಮಾತನಾಡಿ, ಇದೊಂದು ಭಯಾನಕ ಮತ್ತು ಅಸ್ವಾಭಾವಿಕ ಕ್ರಿಯೆಯಾಗಿದೆ. ಈ ಹಿಂದೆಯೂ ಈ ತರಹದ ದಾಳಿಗಳು ನಡೆದಿವೆ ಎಂದು ಘಟನೆಯನ್ನು ಖಂಡಿಸಿದ್ದಾರೆ. ಔಷಧ ಕಳ್ಳಸಾಗಣೆಯಲ್ಲಿ ತೊಡಗಿರುವ ಎರಡು ಗುಂಪುಗಳಾದ ಝೀಟಾಸ್ ಮತ್ತು ಜಲಿಸ್ಕೊ ನುಯೆವಾ ಜೆನೆಷಿಯೊನ್‍ ನಡುವೆ ನಡೆದ ಟರ್ಫ್‍ ಯುದ್ಧಗಳ ಪರಿಣಾಮ ಈ ರೀತಿಯ ಹಿಂಸಾಚಾರಗಳಾಗುತ್ತಿವೆ ಎಂದು ತಿಳಿಸಿದ್ದಾರೆ.

Comments are closed.