ಮೂತ್ರವಿಸರ್ಜನೆ ನೆಪವೊಡ್ಡಿ ಪರಾರಿಯಾಗಲು ಆರೋಪಿ ಯತ್ನ, ಕಾಲಿಗೆ ಬಿತ್ತು ಗುಂಡೇಟು

ಬೆಂಗಳೂರು :  ಹೆ ಚ್ ಎ ಎಲ್ ನ ಸಾಯಿಚರಣ ಕೊಲೆ ಪ್ರಕರಣದ ಆರೋಪಿ‌ ಜಾನ್ಸನ್ ಕಾಲಿಗೆ ಪೊಲೀಸರಿಂದ ಗುಂಡೇಟು ಬಿದ್ದಿದೆ. ಜೂನ್ 10 ರಂದು ಸಾಯಿಚರಣ್ ಕೊಲೆ ನಡೆದಿತ್ತು. ಪೋಲೀಸರು ಬಂಧಿಸುವ ವೇಳೆ ಮೂತ್ರ ವಿಸರ್ಜನೆ ನೆಪದಲ್ಲಿ ಜಾನ್ಸನ್ ಪರಾರಿಗೆ ಯತ್ನಿಸಿದ್ದಾನೆ. ಹಿಡಿಯಲು ಬಂದ ಕಾನ್ಸ್ಟೇಬಲ್ ಗಳ ಮೇಲೂ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ  ಆತ್ಮ ರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿಯ ಕಾಲಿಗೆ ತಗುಲಿದೆ. ಘಟನೆಯಲ್ಲಿ ಕಾಂತ ಮತ್ತು ಮಂಜೇಶ್ ಎಂಬ ಪೇದೆಗಳಿಗೆ ಗಾಯಗಳಾಗಿವೆ. ಕೊಲೆ ಪ್ರಕರಣದ ಪಂಚನಾಮೆಗಾಗಿ ಕರೆದೊಯ್ಯುವಾಗ ಘಟನೆ ನಡೆದಿದೆ.

‘ ಹತ್ತನೇ ಜೂನ್ ಕಗ್ಗದಾಸಪುರದಲ್ಲಿ ಸರಗಳ್ಳತನ ನಡೆದಿತ್ತು. ಪರಾರಿಯಾಗಲೆತ್ನಿಸಿದ ಕಳ್ಳನನ್ನು ಸಾಯಿಚರಣ್ ಹಿಡಿಯಲು ಹೋದಾಗ ಆರೋಪಿ ಜಾನ್ಸನ್ ಚಾಕು ಹಾಕುತ್ತಾನೆ. ಬಳಿಕ ಪೋಲೀಸರು ಜಾನ್ಸನ್ ನನ್ನು ಬಂಧಿಸಿದ್ದಾರೆ. ರಾಬರಿ ಹಳೆ ಕೇಸ್ ಇವನ ಮೇಲೆ ದಾಖಲಾಗಿರುತ್ತೆ. ಮರ್ಡರ್ ನಡೆದ ಸ್ಥಳದಲ್ಲಿ ಪಂಚನಾಮೆ ಮಾಡಲು ಹೋದಾಗ ಮುತ್ರ ವಿಸರ್ಜನೆಗೆ ಹೋಗುವುದಾಗಿ ಹೇಳಿ, ಆರೋಪಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಕ್ರೈಂ ಪಿಸಿ ಹಿಡಿಯಲು ಹೋದಾಗ ಕಲ್ಲಿನಿಂದ ಹಲ್ಲೆ ನಡೆಸಿ ಮತ್ತೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಇನ್ಸ್‌ಪೆಕ್ಟರ್ ಸಾಧಿಕ್ ಪಾಷ ಗುಂಡು ಹಾರಿಸಿದ್ದಾರೆ ‘ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿಕೆ ನೀಡಿದ್ದಾರೆ.

Comments are closed.