ಕಾಲುಗಳಿಂದಲೇ ಕಾವ್ಯ ರಚಿಸಿದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ..

ಜರ್ಮನಿ ಹಾಗೂ ಅರ್ಜೆಂಟೀನಾ ನಡುವೆ 2014 ಫಿಫಾ ವಿಶ್ವಕಪ್ ನ ಫೈನಲ್ ನಡೆಯುತ್ತಿತ್ತು. ರಿಯೋ ಡಿ ಜನೈರೋ ದ ಮರಕಾನಾ ಸ್ಟೇಡಿಯಮ್, ಫುಟ್ಬಾಲ್ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿತ್ತು. ಮ್ಯಾಚ್ ನ ನಿಗದಿತ ಅವಧಿ ಮುಗಿದರೂ ಎರಡೂ ತಂಡಗಳಿಂದ ಒಂದೂ ಗೋಲ್ ದಾಖಲಾಗಿರಲಿಲ್ಲ. ಹೆಚ್ಚುವರಿ 30 ನಿಮಿಷದ ಆಟ ಮುಂದುವರೆದಾಗ, ಮರಿಯೋ ಗಾಟ್ಜೆ ಅದ್ಭುತ ಗೋಲು ಗಳಿಸಿ 1 – 0 ಜರ್ಮನಿಗೆ ಮುನ್ನಡೆಯಾಯಿತು. 120 ನೇ ನಿಮಿಷದಲ್ಲಿ ಜರ್ಮನಿಯ ಆಟಗಾರನೊಬ್ಬನ ಫೌಲ್ ನಿಂದಾಗಿ ಅರ್ಜೆಂಟೀನಾ ತಂಡಕ್ಕೆ ಫ್ರೀ ಕಿಕ್  ದೊರಕಿತು. ಈ ಫ್ರೀಕಿಕ್ ನಲ್ಲಿ ಗೋಲ್ ಹೊಡೆದರೆ ಸ್ಕೋರ್ 1 – 1 ಸಮವಾಗಿ ಪೆನಾಲ್ಟಿ ಶೂಟ್ ಔಟ್ ಆಗುವ ಸಾಧ್ಯತೆ ಇತ್ತು. ಅಭಿಮಾನಿಗಳ ಅಪಾರ ನಿರೀಕ್ಷೆಯನ್ನು ಹೊತ್ತು, ಅರ್ಜೆಂಟೀನಾ ಸ್ಟ್ರೈಕರ್ ಲಿಯೊನೆಲ್ ಮೆಸ್ಸಿ ಶೂಟ್ ಮಾಡಿದ ಚೆಂಡು, ಗೋಲ್ ಬಿಟ್ಟು ಹೊರಗೆ ಹೋಯಿತು. ಜರ್ಮನಿಯ ಆಟಗಾರರು, ಕೋಚ್ ಹಾಗೂ ಇಡೀ ದೇಶದ ಜನ ಸಮಾಧಾನದ ನಿಟ್ಟುಸಿರು ಬಿಟ್ಟರು. ‘ ಛೇ, ಎಂಥ ಚಾನ್ಸ್ ಮಿಸ್ ಆಯ್ತು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ‘ ಅಂದುಕೊಂಡರು ಅರ್ಜೆಂಟೀನಾ ಅಭಿಮಾನಿಗಳು. ಇಂತಹ ಅದೆಷ್ಟೊ ಫ್ರೀ ಕಿಕ್ ಗಳನ್ನು ಗೋಲ್ ಹೊಡೆದಿದ್ದ, ಲಿಯೋನೆಲ್ ಮೆಸ್ಸಿಗೆ ಅವತ್ತು ಮಾತ್ರ ಗೋಲ್ ಹೊಡೆಯಲು ಸಾಧ್ಯವಾಗಲಿಲ್ಲ. It was not just his day. ಸಮಯ ಎಂಥೆಂಥವರನ್ನೂ ಸಹ ಒಮ್ಮೊಮ್ಮೆ ಅಸಹಾಯಕರನ್ನಾಗಿ ಮಾಡಿಬಿಡುತ್ತದೆ. ಜರ್ಮನಿ ಆ ಪಂದ್ಯವನ್ನು ಗೆದ್ದು ವಿಶ್ವಚಾಂಪಿಯನ್ ಎನಿಸಿಕೊಂಡಿತು. ತನ್ನ ದೇಶದ ಪರವಾಗಿ ದೊಡ್ಡ ಚಾಂಪಿಯನ್ ಷಿಪ್ ಒಂದನ್ನು ಗೆಲ್ಲಬೇಕೆಂಬ ಮೆಸ್ಸಿಯ ಕನಸು, ಕನಸಾಗಿಯೇ ಉಳಿಯಿತು.

ಆದರೆ ಕ್ಲಬ್ ಫುಟ್ಬಾಲ್ ನಲ್ಲಿ ಬಾರ್ಸಿಲೋನಾ ಪರವಾಗಿ ಅಭೂತಪೂರ್ವ ಯಶಸ್ಸನ್ನು ಕಂಡಿರುವ ಲಿಯೋನೆಲ್ ಇಂದು ವಿಶ್ವದ ಸಾರ್ವಕಾಲಿಕ ಶ್ರೇಷ್ಟ ಫುಟ್ಬಾಲ್ ಆಟಗಾರರಲ್ಲಿ ಒಬ್ಬ. ಮರಡೋನಾ, ಪೀಲೆ, ರೊನಾಲ್ಡಿನೊ ಸೇರಿದಂತೆ ಅನೇಕ ಫುಟ್ಬಾಲ್ ದಿಗ್ಗಜರು ಮೆಸ್ಸಿ ಆಟಕ್ಕೆ ಮನಸೋತವರೇ. ಉಳಿದ ಆಟಗಾರರಲ್ಲಿ ಇಲ್ಲದ ವಿಶೇಷತೆಯೊಂದು ಮೆಸ್ಸಿಯಲ್ಲಿದೆ ಎಂಬುದೇ ಎಲ್ಲರ ಅಭಿಪ್ರಾಯ. ವೇಗವಾಗಿ ಓಡುತ್ತ, ಡ್ರಿಬಲ್ ಮಾಡಿ ಎದುರಾಳಿಗಳನ್ನು ಮೂರ್ಖರನ್ನಾಗಿಸುವ ರೀತಿ, ಡಿಫೆನ್ಸ್ ಆಟಗಾರರ ಎರಡು ಕಾಲುಗಳ ನಡುವಿನ ಗ್ಯಾಪ್ ನಲ್ಲಿ ಚೆಂಡನ್ನು ತಳ್ಳಿ (nutmegging) ತಬ್ಬಿಬ್ಬುಗೊಳಿಸುವುದು, ನಾಲ್ಕೈದು ಆಟಗಾರರನ್ನು ಟ್ಯಾಕಲಿಂಗ್ ಮೂಲಕ ವಂಚಿಸಿ ಗೋಲ್ ಹೊಡೆಯುವ ರೀತಿ ನೋಡಲು ಅದ್ಭುತವಾಗಿರುತ್ತದೆ.

 

 

ಮೈದಾನದಲ್ಲಿ ಬಿರುಗಾಳಿಯಂತೆ ಭಾಸವಾಗುವ ಮೆಸ್ಸಿ, ಹೊರಗಡೆ ತುಂಬ ಶಾಂತ, ಸೌಮ್ಯ ಸ್ವಭಾವದ ವ್ಯಕ್ತಿತ್ವ ಹೊಂದಿದವ. ಹಾಗಾಗಿಯೇ ಅಭಿಮಾನಿಗಳೆಲ್ಲ ಅವರನ್ನು #MagicCalmMessi ಎಂಬ ಟ್ಯಾಗ್ ಲೈನ್ ನಿಂದ ಗುರುತಿಸುತ್ತಾರೆ. ಬಾರ್ಸಿಲೋನಾದ ಕೋಚ್, ಪೆಪ್ ಗಾರ್ಡಿಯೋಲಾ, ಮೆಸ್ಸಿ ಯ ಬಗ್ಗೆ ಹೀಗೆ ಹೇಳಿದ್ದಾರೆ ‘ Don’t try to write about him, Don’t try to describe him, just watch him play ‘. ( ಅವನ ಕುರಿತು ಬರೆಯಬೇಡಿ, ವಿಶ್ಲೇಷಿಸಬೇಡಿ, ಬರೀ ಅವನ ಆಟವನ್ನು ನೋಡಿ ) ಎಂದಿದ್ದಾರೆ. ಸೊಗಸಾದ ಕಾವ್ಯದಂತಿರುವ ಮೆಸ್ಸಿ ಆಟವನ್ನು ನೋಡಿಯೇ ಆನಂದಿಸಬೇಕು ಹೊರತು ಅಕ್ಷರಗಳಲ್ಲಿ, ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ.

ಈ ಲಿಯೋನೆಲ್ ಮೆಸ್ಸಿ ಎಂಬ ಫುಟ್ಬಾಲ್ ಮ್ಯಾಜಿಶಿಯನ್ ಹುಟ್ಟಿದ್ದು 1987, ಜೂನ್ 24 ರಂದು, ಅರ್ಜೆಂಟೀನಾದ ರೋಸಾರಿಯೋ ನಗರದಲ್ಲಿ. ಜಾರ್ಜ್ ಜಾಗೂ ಸೆಲಿಯಾ ದಂಪತಿಗಳಿಗೆ ಮೂರನೆಯ ಮಗನಾಗಿ ಜನಿಸಿದ ಲೂಯಿಸ್ ಲಿಯೋನೆಲ್ ಆ್ಯಂಡ್ರೆಸ್ ಮೆಸ್ಸಿಗೆ ಬಾಲ್ಯದಿಂದಲೂ ಫುಟ್ಬಾಲ್ ಎಂದರೆ ಅಚ್ಚುಮೆಚ್ಚು. ತನ್ನ ಇಬ್ಬರು ಅಣ್ಣಂದಿರಾದ ರೊಡ್ರಿಗೊ ಹಾಗೂ ಮ್ಯಾಟಿಯಸ್ ಅವರೊಂದಿಗೆ ಫುಟ್ಬಾಲ್ ಆಡಲು ಹೋಗುತ್ತಿದ್ದ ಮೆಸ್ಸಿ

   
5 ವರ್ಷದವರಾಗಿದ್ದಾಗ , ತಂದೆಯೇ ಕೋಚ್ ಆಗಿದ್ದ ಗ್ರ್ಯಾಂಡೊಲಿ ಕ್ಲಬ್ ಪರವಾಗಿ ಆಡಲು ಶುರುಮಾಡುತ್ತಾರೆ. ತನ್ನ ಅಸಾಧಾರಣ ವೇಗ, ಚುರುಕುತನ, ಕಾಲ್ಚಳಕದಿಂದ ಮೆಸ್ಸಿ 8 ನೇ ವಯಸ್ಸಿಗೇ ತಮ್ಮೂರಿನ ನೆವೆಲ್ಸ್ ಕ್ಲಬ್ ಪರವಾಗಿ ಆಡುವ ಅವಕಾಶ ಪಡೆಯುತ್ತಾರೆ. ‘ The machine of 87 ‘ ಎಂದೇ ಕರೆಯಲ್ಪಡುತ್ತಿದ್ದ ನಿವೆಲ್ಸ್  ಓಲ್ಡ್ ಬಾಯ್ಸ್ ಕ್ಲಬ್ ಅಸಾಧಾರಣ ಪ್ರತಿಭಾವಂತರಿಂದ ಕೂಡಿತ್ತು. ನಿವೆಲ್ಸ್ ಕ್ಲಬ್ ನ ಕೋಚ್ ಆಗಿದ್ದ, ಕಾರ್ಲೊಸ್ ಮಾರ್ಕೋನಿಗೆ ಮೆಸ್ಸಿಗೆ ಚಾಕಲೇಟ್ ಫ್ಲೇವರ್ ಕುಕೀಸ್ ಎಂದರೆ ಇಷ್ಟವೆಂದು ಗೊತ್ತಿತ್ತು. ಒಂದು ಗೋಲು ಹೊಡೆದರೆ ಒಂದು ಚಾಕಲೇಟ್ ಬಿಸ್ಕತ್ ಕೊಡುತ್ತೇನೆ, ಹೆಡರ್ ನಿಂದ ಗೋಲು ಗಳಿಸಿದರಂತೂ ಎರಡು ಬಿಸ್ಕತ್ ಕೊಡುತ್ತೇನೆ ಎಂದು ಹೇಳಿದ್ದರಂತೆ. ಎದುರಾಳಿ ತಂಡದ ಎಲ್ಲ ಡಿಫೆನ್ಸ್ ಆಟಗಾರರನ್ನು ವಂಚಿಸಿ, ಚೆಂಡನ್ನು ಗೋಲ್ ಪೋಸ್ಟ್ ಬಳಿ ಒಯ್ದು, ಚೆಂಡನ್ನು ಮೇಲೆ ಹಾರಿಸಿ, ತಲೆಯಿಂದಲೇ ಗೋಲ್ ಹೊಡೆಯುತ್ತಿದ್ದ. ಅಷ್ಟು ಮಾತ್ರವಲ್ಲದೇ ಮಾರ್ಕೋನಿ ಕಡೆಗೆ ತಿರುಗಿ, ‘ ಎರಡು ಬಿಸ್ಕತ್ , ನೆನಪಿರಲಿ ‘ ಎಂದು ಕೈ ಸನ್ನೆ ಮಾಡುತ್ತಿದ್ದ.

ಮೆಸ್ಸಿ 12 ವರ್ಷದವನಾಗಿದ್ದಾಗ ಆತನ ತಂದೆ ತಾಯಿಗಳಿಗೆ , ಅವನ ಬೆಳವಣಿಗೆ, ಇತರ ಹುಡುಗರಿಗೆ ಹೋಲಿಸಿದರೆ ಕುಂಠಿತವಾಗಿದೆ ಎನಿಸಿತು. ವೈದ್ಯರಲ್ಲಿ ಚೆಕಪ್ ಮಾಡಿಸಿದಾಗ, ಮೆಸ್ಸಿ ಪರಿವಾರಕ್ಕೊಂದು ಆಘಾತ ಕಾದಿತ್ತು. ವೈದ್ಯರು ‘ ಹುಡುಗನ ದೇಹದಲ್ಲಿ ಬೆಳವಣಿಗೆ ಹಾರ್ಮೋನುಗಳ ಕೊರತೆಯಿದೆ, ಅದರ ಚಿಕಿತ್ಸೆಗಾಗಿ ನೂರಾರು ಡಾಲರ್ ಗಳಷ್ಟು ಖರ್ಚಾಗುತ್ತದೆ ‘ ಎಂದರು. ಅಷ್ಟೊಂದು ವೆಚ್ಚ ಭರಿಸುವ ಸಾಮರ್ಥ್ಯ ಕುಟುಂಬಕ್ಕೆ ಇರಲಿಲ್ಲ. ಯಾವ ಕ್ಲಬ್ ಗಳೂ ಕೂಡ ಮೆಸ್ಸಿಯ ಚಿಕಿತ್ಸೆಯ ವೆಚ್ಚ ಭರಿಸಲು ಮುಂದಾಗಲಿಲ್ಲ. ಕೊನೆಗೆ ಮೆಸ್ಸಿಯ ಪ್ರತಿಭೆಯನ್ನು ಗುರುತಿಸಿದ ಸ್ಪೇನ್ ನ ಬಾರ್ಸಿಲೋನಾ ಕ್ಲಬ್, ಚಿಕಿತ್ಸೆಯ ಜವಾಬ್ದಾರಿಯನ್ನು ವಹಿಸಿಕೊಂಡು, 14 ವಯಸ್ಸಿನೊಳಗಿನವರ  ‘ La Masia ‘ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ನೀಡುತ್ತದೆ. ಇದೇ ಮೆಸ್ಸಿ ಬದುಕಿನ turning point ಎಂದು ಹೇಳಬಹುದು. ಚಿಕಿತ್ಸೆಯ ಸಮಯದಲ್ಲಿ ಪ್ರತಿದಿನ ಎರಡೂ ಕಾಲುಗಳಿಗೆ ಒಂದೊಂದು ಇಂಜೆಕ್ಷನ್ ಗಳನ್ನು ನೀಡಲಾಗುತ್ತಿತ್ತು. ಮುಂದೊಂದು ದಿನ ಅರ್ಜೆಂಟೈನ ತಂಡಕ್ಕಾಗಿ ಆಡಬೇಕೆಂಬ ಕನಸನ್ನು ಹೊತ್ತಿದ್ದ ಮೆಸ್ಸಿ , ಇಂಜೆಕ್ಷನ್ನಿನ ನೋವಿನ ನಡುವೆಯೂ ಫುಟ್ಬಾಲ್ ಅಭ್ಯಾಸವನ್ನು ಮುಂದುವರೆಸುತ್ತಾರೆ. ತರಬೇತಿ ಕ್ಯಾಂಪ್ ಗಳಲ್ಲಿ ಈತನ ಆಟ ನೋಡಿ, ಬಾರ್ಸಿಲೋನಾ ಕ್ಲಬ್ ನ ಮ್ಯಾನೇಜರ್ ಚಾರ್ಲೀ ರೆಕ್ಸಾಕ್ ಎಷ್ಟು ಪ್ರಭಾವಿತರಾದರೆಂದರೆ, ಹೋಟೆಲ್ ನಲ್ಲಿ ಮೆಸ್ಸಿಯನ್ನು ಭೇಟಿಯಾಗಿ ಅಲ್ಲಿ ಟೇಬಲ್ ಮೇಲಿದ್ದ, ಕೈ ಒರೆಸುವ ನ್ಯಾಪ್ ಕಿನ್ ಮೇಲೆಯೇ (FCB) ಕಾಂಟ್ರಾಕ್ಟ್ ಬರೆದು ಸಹಿ ತೆಗೆದುಕೊಂಡರು. ಆ ನ್ಯಾಪ್ ಕಿನ್ ಇವತ್ತಿಗೂ ಅವರ ಸಂಗ್ರಹದಲ್ಲಿದೆ.

 

ಮೊದಲು ಜ್ಯೂನಿಯರ್ ಹಂತದ ಪಂದ್ಯಗಳಲ್ಲಿ ಆಡಿದ ಮೆಸ್ಸಿ, ಕೇವಲ 16 ವರ್ಷದವರಾಗಿದ್ದಾಗ, 2004 ಅಕ್ಟೋಬರ್ ನಲ್ಲಿ ಬಾರ್ಸಿಲೋನಾ ಕ್ಲಬ್ ಪರವಾಗಿ ಮೊದಲ ಪಂದ್ಯ ಆಡಿದರು. ಅಲ್ಲಿಂದ ಮತ್ತೆ ತಿರುಗಿ ನೋಡಿದ್ದೇ ಇಲ್ಲ. ಗೆದ್ದ ಚಾಂಪಿಯನ್ ಷಿಪ್ ಗಳು, ಟ್ರೋಫಿಗಳು, ಹೊಡೆದ ಗೋಲ್ ಗಳು, ಮಾಡಿದ ದಾಖಲೆಗಳು ಅಸಂಖ್ಯ.. 2005 ಆಗಸ್ಟ್ ನಲ್ಲಿ ಅರ್ಜೆಂಟೀನಾ ಪರವಾಗಿ ಮೊದಲ ಪಂದ್ಯ ಆಡಿದ ಮೆಸ್ಸಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ರೆಕಾರ್ಡ್ ಕೂಡ ಹೊಂದಿದ್ದಾರೆ. ಜರ್ಮನಿಯ ಗೆರ್ಡ್ ಮುಲ್ಲರ್  ಹೆಸರಿನಲ್ಲಿದ್ದ ದಾಖಲೆಯನ್ನು ಮೆಸ್ಸಿ 2012 ರಲ್ಲಿ 91 ಗೋಲು ಗಳಿಸುವ ಮೂಲಕ ತಮ್ಮದಾಗಿಸಿಕೊಂಡರು. ಮೆಸ್ಸಿ ತಮ್ಮ ಕೆರಿಯರ್ ನಲ್ಲಿ 500 ಕ್ಕೂ ಹೆಚ್ಚು ಗೋಲು ದಾಖಲಿಸಿದ್ದಾರೆ. ಪ್ರತಿ ವರ್ಷ ಶ್ರೇಷ್ಟ ಪ್ರದರ್ಶನ ತೋರಿದ ಆಟಗಾರನಿಗೆ ನೀಡಲಾಗುವ Ballon d’Or ಪ್ರಶಸ್ತಿಯನ್ನು ಮೆಸ್ಸಿ 5 ಬಾರಿ ತಮ್ಮದಾಗಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿದ್ದರೂ, ತನ್ನ ದೇಶಕ್ಕಾಗಿ ವರ್ಲ್ಡ್ ಕಪ್ ನಂತಹ ಯಾವ ದೊಡ್ಡ ಚಾಂಪಿಯನ್‌ಶಿಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಕೊರಗು ಮೆಸ್ಸಿಯ ಮನಸಿನಲ್ಲಿ ಹಾಗೇ ಉಳಿದಿದೆ. 2016 ರಲ್ಲಿ ಕೋಪಾ ಅಮೇರಿಕಾ ಚಾಂಪಿಯನ್‌ಶಿಪ್ ನ ಫೈನಲ್ ನಲ್ಲಿ ಚಿಲಿ ವಿರುದ್ಧ ಸೋಲಿನ ನಿರಾಸೆಯಿಂದ ಮೆಸ್ಸಿ ಅರ್ಜೆಂಟೀನಾ ತಂಡದಿಂದ ಸ್ವಯಂ ನಿವೃತ್ತಿ ಕೈಗೊಂಡರೂ ನಂತರ ಅಭಿಮಾನಿಗಳ ಒತ್ತಾಯದ ಮೇರೆಗೆ ನಿವೃತ್ತಿಯನ್ನು ಹಿಂಪಡೆದಿದ್ದಾರೆ.

 

ಲಿಯೋ ಹುಟ್ಟೂರಾದ ರೊಸಾರಿಯೋ ದಲ್ಲಿ  ಪಾಲಕರು ತಮ್ಮ ಮಕ್ಕಳಿಗೆ ಮೆಸ್ಸಿ ಎಂದು ಹೆಸರನ್ನು ಇಡುವಂತಿಲ್ಲ. ಹೌದು, ವಿಚಿತ್ರ ಅನಿಸಿದರೂ ನಿಜ. ಮೆಸ್ಸಿ ಎನ್ನುವುದು ಕುಟುಂಬದ ಸರ್ನೇಮ್ ಹೊರತು ವ್ಯಕ್ತಿಯ ಹೆಸರಲ್ಲ . ಕುಟುಂಬದ ಹೆಸರನ್ನೇ ಮಕ್ಕಳಿಗೆ ಇಟ್ಟರೆ, ಪ್ರತ್ಯೇಕವಾಗಿ ಗುರುತಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಸರ್ಕಾರವೇ ಈ ಆದೇಶ ಹೊರಡಿಸಿದೆ.

ಪ್ರತಿ ಗೋಲ್ ನಂತರ ಮೆಸ್ಸಿ ಎರಡೂ ಕೈಗಳನ್ನು ಮೇಲೆತ್ತಿ ಆಗಸದ ಕಡೆ ಬೆರಳು ಮಾಡಿ ಸಂಭ್ರಮಿಸುತ್ತಾರೆ. ಈ celebration ನ ಹಿಂದೆ ಒಂದು ಭಾವನಾತ್ಮಕ ನಂಟಿದೆ. ಮೆಸ್ಸಿಯ ಬಾಲ್ಯದ ದಿನಗಳಲ್ಲಿ ಫುಟ್ಬಾಲ್ ಪ್ರತಿಭೆಯನ್ನು, ಆಸಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸಿದ್ದು ಅವರ ಅಜ್ಜಿ. ಮೊಮ್ಮಗನನ್ನು ತರಬೇತಿ ಕ್ಯಾಂಪ್ ಗಳಿಗೆ, ಮ್ಯಾಚ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದ ಅಜ್ಜಿ, ಮೆಸ್ಸಿಗೆ ಫುಟ್ಬಾಲ್ ಒಂದು ಉಡುಗೊರೆಯಾಗಿ ನೀಡಿದ್ದರು. ‘ ನಾನೊಬ್ಬ ಫುಟ್ಬಾಲ್ ಆಟಗಾರನಾಗಿ ರೂಪುಗೊಳ್ಳುವಲ್ಲಿ ನನ್ನ ಅಜ್ಜಿಯ ಪಾತ್ರ ತುಂಬ ದೊಡ್ಡದು, ಅವರೇ ನಾನು ಫುಟ್ಬಾಲ್ ಆಡಲು ಕಾರಣ ‘ ಎಂದು ಹೇಳುವ ಮೆಸ್ಸಿ ಇವತ್ತಿಗೂ ತಮ್ಮ ಪ್ರತಿ ಗೋಲ್ ನಂತರ ಆಕಾಶದ ಕಡೆ ಬೆರಳು ಮಾಡಿ ಅಜ್ಜಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

 

ಇದೇ ಜೂನ್ 30 ರಂದು ತಮ್ಮ ಬಹುಕಾಲದ ಗೆಳತಿ ಆ್ಯಂಟೋನೆಲ್ಲಾ ರಾಕ್ಕುಜೋ ಅವರೊಂದಿಗೆ ಮೆಸ್ಸಿ ವಿವಾಹವಾಗಲಿದ್ದಾರೆ. ಮೆಸ್ಸಿ 5 ವರ್ಷದವರಿದ್ದಾಗನಿಂದಲೂ ಆ್ಯಂಟೋನೆಲ್ಲಾ ಗೆಳತಿಯಾಗಿ, ಪ್ರೇಮಿಯಾಗಿ, ಮೆಸ್ಸಿ ಬದುಕಿನ ಎಲ್ಲ ಸುಖ, ದುಃಖ, ಸೋಲು, ಗೆಲುವುಗಳಲ್ಲಿ ಜೊತೆಯಾಗಿದ್ದವರು.  2008 ರಿಂದ ಲಿವ್ ಇನ್ ರಿಲೇಶನ್ ಷಿಪ್ ನಲ್ಲಿರುವ ಇವರಿಬ್ಬರಿಗೆ ಥಿಯಾಗೊ ಹಾಗೂ ಮಾಟಿಯೊ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

‘ ನಾನು ಫುಟ್ಬಾಲ್ ಆಡುವುದಕ್ಕೆ ಶುರು ಮಾಡಿದ್ದು ಅದರ ಮೇಲೆ ನನಗಿರುವ ಪ್ರೀತಿಯಿಂದ. ನನಗೆ ತುಂಬಾ ಖುಷಿ ಸಿಗುತ್ತದೆ ಎಂಬ ಕಾರಣಕ್ಕೆ ಆಡುತ್ತೇನೆಯೇ ಹೊರತು , ಅದು ನನ್ನ ವೃತ್ತಿ ಎಂಬ ಕಾರಣಕ್ಕಲ್ಲ, ಪುಟ್ಬಾಲ್ ಅನ್ನು ನಾನು ಆಟವಾಗಿ ಮಾತ್ರ ಪರಿಗಣಿಸುತ್ತೇನೆ ‘ ಎನ್ನುವ ಮೆಸ್ಸಿಗೆ ಇಂದು 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. Happy birthday Magical Messi..

 

 

 

8 thoughts on “ಕಾಲುಗಳಿಂದಲೇ ಕಾವ್ಯ ರಚಿಸಿದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ..

 • October 18, 2017 at 12:38 PM
  Permalink

  Peculiar article, exactly what I was looking for.|

 • October 18, 2017 at 2:24 PM
  Permalink

  Hello there, just became alert to your blog through Google, and found that it is truly informative. I am gonna watch out for brussels. I’ll appreciate if you continue this in future. Numerous people will be benefited from your writing. Cheers!|

 • October 18, 2017 at 4:10 PM
  Permalink

  I’ve been browsing online more than 3 hours today, yet I never found any interesting article like yours. It’s pretty worth enough for me. In my view, if all web owners and bloggers made good content as you did, the net will be a lot more useful than ever before.|

 • October 20, 2017 at 7:16 PM
  Permalink

  Have you ever thought about creating an ebook or guest authoring on other blogs? I have a blog centered on the same ideas you discuss and would love to have you share some stories/information. I know my visitors would value your work. If you are even remotely interested, feel free to shoot me an e mail.|

 • October 21, 2017 at 1:32 AM
  Permalink

  Have you ever thought about adding a little bit more than just your articles?
  I mean, what you say is important and all. However imagine if you added some great photos or
  video clips to give your posts more, “pop”! Your content is excellent but with
  images and videos, this blog could undeniably be one of the best in its
  field. Great blog!

 • October 21, 2017 at 4:08 AM
  Permalink

  Today, while I was at work, my cousin stole my iPad and tested to see if it can survive a forty foot drop, just so she can be a youtube sensation. My apple ipad is now broken and she has 83 views. I know this is completely off topic but I had to share it with someone!|

 • October 21, 2017 at 4:16 AM
  Permalink

  Greetings! This is my 1st comment here so
  I just wanted to give a quick shout out and tell you I truly enjoy reading
  your blog posts. Can you recommend any other blogs/websites/forums that cover the
  same subjects? Thank you so much!

 • October 24, 2017 at 12:27 PM
  Permalink

  Ahaa, its nice discussion concerning this piece of writing at this place at this website,
  I have read all that, so now me also commenting at
  this place.

Comments are closed.