ಬೆಂಗಳೂರು : ರೌಡಿ ಶೀಟರ್ ಲೇಔಟ್ ಪಳನಿ ಮೇಲೆ ಬರ್ಬರ ಹತ್ಯೆ

ಬೆಂಗಳೂರು : ರೌಡಿ ಶೀಟರ್  ಲೇಔಟ್ ಪಳನಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ನಾಲ್ಕು ಜನರ  ಗ್ಯಾಂಗ್  ಬೈಕ್ ಮೇಲೆ ಬಂದು ಸಿಸಿಟಿವಿ ಕ್ಯಾಮೆರಾದ ವೈರ್ ಕತ್ತರಿಸಿದ್ದಾರೆ. ನಂತರ ಮನೆ ಮುಂದಿನ ಆಫೀಸಿನಲ್ಲಿದ್ದ ಪಳನಿಯ ಮೇಲೆ ಅಟ್ಯಾಕ್ ಮಾಡಿ ಮಚ್ಚು ಲಾಂಗುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪೋಲೀಸರು ಹಳೆ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ  ರವಾನಿಸಲಾಗಿದೆ. ಮೂರು ವರ್ಷಗಳ ಹಿದೆಯು ಸಹ ಪಳನಿ ಮೇಲೆ ಅಟ್ಯಾಕ್ ಅಗಿತ್ತು.  ಲೇಔಟ್ ಪಳನಿ ಕಳೆದ ೨೦ ವರ್ಷಗಳಿಂದ ಕೆ ಜಿ ಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ. ಕಳೆದ ಬಾರಿ ಇಂದಿರಾನಗರದ ಮಲ್ಲೆಶ್ ಅಂಡ್ ಗ್ಯಾಂಗ್  ಪಳನಿ ಮೇಲೆ ಅಟ್ಯಾಕ್ ಮಾಡಿತ್ತು. ಕೆ ಜಿ ಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.