ಪತಂಜಲಿ ಉತ್ಪನ್ನಗಳು ಆಹಾರ ಯೋಗ್ಯವಾಗಿಲ್ಲ: ರಾಮದೇವ್‍ಗೆ ಶಾಕ್

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬೆನ್ನಲ್ಲೇ ನೇಪಾಳ ಸರ್ಕಾರ ಪತಂಜಲಿ ಉತ್ಪನ್ನಗಳ ತಯಾರಕ ಬಾಬಾ ರಾಮ್‍ದೇವ ಗೆ ಶಾಕ್‍ವೊಂದನ್ನು ನೀಡಿದೆ. ಪತಂಜಲಿಯ ಉತ್ಪನ್ನಗಳಲ್ಲಿ ಏಳು ಉತ್ಪನ್ನಗಳು ಆಹಾರ ಯೋಗ್ಯವಿಲ್ಲ ಎಂದು ಅಲ್ಲಿನ ಸರ್ಕಾರ ಪ್ರಕಟನೆಯಲ್ಲಿ ತಿಳಿಸಿದೆ.

ಸರ್ವಶ್ರೇಷ್ಟ ಪತಂಜಲಿ ಆಯುರ್ವೇದಿಕ್‍ ಉತ್ಪನ್ನಗಳನ್ನು ಪ್ರಚುರಪಡಿಸುತ್ತಿರುವ ರಾಮದೇವ್‍ಗೆ ನೇಪಾಳ ಸರ್ಕಾರ ಆಘಾತವನ್ನುಂಟು ಮಾಡಿದೆ. ಪತಂಜಲಿಯ ಏಳು ಉತ್ಪನ್ನಗಳನ್ನು ಪರಿಷ್ಕರಿಸಿದಾಗ ಅವುಗಳು ಯೋಗ್ಯವಾಗಿಲ್ಲ ಎಂದು ಹೇಳಿದೆ. ಆಯುರ್ವೇದ ಗುಳಿಗೆಗಳು ಮತ್ತು ಭಕ್ತೋಲವ, ಆಮ್ಲಾ ಪುಡಿ, ದಿವ್ಯ ಗೈಸರ್ ಪುಡಿ, ಬಕುಚಿ ವರ್ಣ, ತ್ರಿಫಲಾ ಪುಡಿ, ಅಗಂಧ ಮತ್ತು ಆಧ್ಯೇಯ ಪುಡಿ ಆಹಾರ ಯೋಗ್ಯವಾಗಿಲ್ಲವೆಂದು ತಿಳಿಸಲಾಗಿದೆ.

ನೇಪಾಳದ ಪ್ರಶಾಸನ ವಿಭಾಗವು ಬುಧವಾರ ಈ ವಿಷಯವನ್ನು ಪ್ರಕಟಿಸಿದೆ. ದಿವ್ಯ ಫಾರ್ಮೆಸಿಯಲ್ಲಿ ತಯಾರಿಸಲಾಗಿರುವ ಪತಂಜಲಿ ಆಯುರ್ವೇದಿಕ್‍ ಉತ್ಪನ್ನಗಳು ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ವಿಭಾಗದ ಒಬ್ಬ ಅಧಿಕಾರಿ ಈ ವಿಷಯದ ಬಗ್ಗೆ ಮಾತನಾಡಿದ್ದು, ಪತಂಜಲಿ ಗುಳಿಗೆಗಳನ್ನು ವಿಭಾಗದಲ್ಲಿ ಪರಿಷ್ಕರಣೆ ನಡೆಸಿದಾಗ, ಗುಳಿಗೆಗಳಲ್ಲಿ ರೋಗ ಹರಡುವ ಬ್ಯಾಕ್ಟೀರಿಯಾ ಇರುವುದು ಕಡು ಬಂದಿದೆ. ಆದ್ದರಿಂದ ಈ ಉತ್ಪನ್ನಗಳ ಮಾರಾಟ ಮತ್ತು ರೋಗಿಗಳಿಗೆ ಈ ಮಾತ್ರೆಗಳನ್ನು ಸೇವಿಸಲು ಸಲಹೆ ಮಾಡದಂತೆ ಆದೇಶ ಹೊರಡಿಸಿದೆ.

Comments are closed.

Social Media Auto Publish Powered By : XYZScripts.com