ಡ್ರೆಸ್ಸಿಂಗ್‍ ರೂಮ್‍ನಲ್ಲಿ ನಡೆದದ್ದೇನು: ಕೊಹ್ಲಿ ಹೊರ ಹಾಕಲಿಚ್ಛಿಸದ ಸತ್ಯ ಯಾವುದು?

ಪೋರ್ಟ್‍ ಆಫ್‍ ಸ್ಪೇನ್‍: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‍ ಕೊಹ್ಲಿ ಮತ್ತು ಭಾರತ ತಂಡದ ಕೋಚ್‍ ಆಗಿದ್ದ ಅನಿಲ್‍ ಕುಂಬ್ಳೆ ಅವರ ನಡುವಿನ ಭಿನ್ನಾಭಿಪ್ರಾಯ, ಇರಿಸುಮುರಿಸನ್ನು ಎಲ್ಲರೂ ನೋಡಿದ್ದೇವೆ. ಕೋಚ್‍ ಸ್ಥಾನಕ್ಕೆ ಕುಂಬ್ಳೆ ಅವರನ್ನು ನೇಮಿಸುವ ಬಗ್ಗೆ ಸಾಕಷ್ಟು ಭಿನ್ನಭಿಪ್ರಾಯಗಳು ಕೊಹ್ಲಿ ಮತ್ತು ಕುಂಬ್ಳೆ ನಡುವೆ ನಡೆದು ಹೋಗಿವೆ. ಆದರೆ ಇದ್ಯಾವುದಕ್ಕೂ ಪ್ರತಿಕ್ರಿಯಿಸಿರದ ಕೊಹ್ಲಿ ಇದೀಗ ಅಸಮಾಧಾನ ಹೊರ ಹಾಕಿದ್ದಾರೆ.

ಕುಂಬ್ಳೆ ಅವರ ಬಗ್ಗೆ ಮೆಚ್ಚುಗೆ ಸೂಚಿಸಿ ಬರೆದುಕೊಂಡಿದ್ದ ಟ್ವಿಟ್ಟರ್‍ ಸ್ಟೇಟಸ್‍ನ್ನು ಅಳಿಸಿ ಹಾಕಿದ ಮೇಲೆ ಇದೇ ಮೊದಲ ಬಾರಿಗೆ ಕೊಹ್ಲಿ, ಕುಂಬ್ಳೇ ಅವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸದ್ಯ ವೆಸ್ಟ್ ಇಂಡೀಸ್‍ ಟೂರ್‍ನಲ್ಲಿರುವ ಕೊಹ್ಲಿ ಏಕದಿನ ಪಂದ್ಯ ನಡೆಯುವ ಮೊದಲು ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕೊಹ್ಲಿ ಮಾತನಾಡಿ, ಒಬ್ಬ ಆಟಗಾರನಾಗಿ ನನಗೆ ಕುಂಬ್ಳೆ ಅವರ ಮೇಲೆ ತುಂಬಾ ಗೌರವವಿದೆ. ಅವರನ್ನು ಟೀಂನಲ್ಲಿದ್ದ ಪ್ರತಿ ಆಟಗಾರರೂ ಗೌರವಿಸಿದ್ದಾರೆ. ಆದರೆ ಅಂದು ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್ ರೂಮಿನಲ್ಲಿ ನಡೆದ ಸನ್ನಿವೇಶದ ವಿಚಾರವನ್ನು ಯಾವುದೇ ಕಾರಣಕ್ಕೂ ಹೇಳುವುದಿಲ್ಲ. ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ನಂತರ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಲು ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com