ಬಹಳ ನೋವಿನಿಂದ ರಾಜೀನಾಮೆ ನೀಡುತ್ತಿದ್ದೇನೆ ಕಾಂಗ್ರೆಸ್‍ ಹಿರಿಯ ಮುಖಂಡ ಎಚ್‍.ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್‍ ಹಿರಿಯ ಮುಖಂಡ ಎಚ್‍.ವಿಶ್ವನಾಥ್‍ ಅವರು ಬೆಳಗ್ಗೆ ಕೆಪಿಸಿಸಿ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಸಿದ ಮಾತನಾಡಿದ ಎಚ್‍.ವಿಶ್ವನಾಥ್‍, “ಬಹಳ ನೋವಿನಿಂದ ನಾನು ರಾಜೀನಾಮೆ ನೀಡುತ್ತಿದ್ದಾನೆ. ಈ ವೇಳೆ  ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‍ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವನಾಥ್ ಅವರು ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷರಿಗೆ ಕಳುಹಿಸಿ ಎಂದು ಹೇಳಿದ್ದಾರೆ. ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಅವರ ಪತ್ರವನ್ನು ದೆಹಲಿಗೆ ಕಳುಹಿಸಿಕೊಡುತ್ತೇನೆ. ಅನೇಕ ಸಂದರ್ಭಗಳಲ್ಲಿ ರಾಜೀನಾಮೆ ಕೊಡದಂತೆ ನಾನು ಮನವೊಲಿಸಲು ಪ್ರಯತ್ನಿಸಿದ್ದೆ. ಆದರೆ ಅದ್ಯಾವುದೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ ತಮ್ಮ ಬೆಂಬಲಿಗರ ಜತೆಗೆ ಬಂದು ರಾಜೀನಾಮೆ ಸಲ್ಲಿಸಿದ ವಿಶ್ವನಾಥ್ ಅವರಿಗೆ ಕಾರ್ಯಕರ್ತರು ರಾಜೀನಾಮೆ ಸಲ್ಲಿಸದಂತೆ ಮನವಿ ಮಾಡಿದರು. ಆದರೆ ಕಾರ್ಯಕರ್ತರತ್ತ ಕೈ ಬೀಸಿದ ವಿಶ್ವನಾಥ್‍ ಮುಗುಳ್ನಗೆ ಬೀರಿ ಕಚೇರಿಯಿಂದ ಹೊರ ನಡೆದರು.

Comments are closed.

Social Media Auto Publish Powered By : XYZScripts.com